ಸೋಮವಾರ, ನವೆಂಬರ್ 18, 2019
29 °C

ನೌಕರರ ಶೋಷಣೆ | ಅನಿಷ್ಟ ವ್ಯವಸ್ಥೆ ಎಲ್ಲೆಡೆ ಇದೆ

Published:
Updated:

‘ಹೊರಗುತ್ತಿಗೆ ಎಂಬ ಜೀತ’ ಲೇಖನ (ಪ್ರ.ವಾ., ಒಳನೋಟ, ನ. 3) ಸಮಯೋಚಿತವಾಗಿದೆ. ಈ ಅನಿಷ್ಟ ವ್ಯವಸ್ಥೆಯು ರಾಜ್ಯ ಸರ್ಕಾರದ ಇಲಾಖೆಗಳಲ್ಲಿ ಮಾತ್ರ ಇಲ್ಲ, ಕೇಂದ್ರ ಸರ್ಕಾರದ ಇಲಾಖೆಗಳಲ್ಲೂ ತೀವ್ರವಾಗಿದೆ.

ಕೇಂದ್ರ ಸರ್ಕಾರಿ ಸ್ವಾಮ್ಯದ ಬಿಎಸ್ಎನ್‌ಎಲ್‌ನಲ್ಲಿ ದಶಕಗಳಿಂದ ಇಂತಹ ಶೋಷಣೆ ಜಾರಿಯಲ್ಲಿದೆ. ಗುತ್ತಿಗೆದಾರರ ಮುಖಾಂತರ ನೇಮಿಸಿಕೊಂಡು, ಅತಿ ಕನಿಷ್ಠ ಸಂಬಳ ನೀಡಿ, ಸೇವಾ ಭದ್ರತೆ ಇಲ್ಲದೆ ಹಗಲೂ ರಾತ್ರಿ ಇವರನ್ನು ಅಮಾನವೀಯವಾಗಿ ದುಡಿಸಿಕೊಳ್ಳಲಾಗುತ್ತಿದೆ.

ಕಾರ್ಮಿಕ ಇಲಾಖೆ ಹಾಗೂ ನ್ಯಾಯಾಲಯಗಳು ಇಂಥವುಗಳನ್ನು ಗಮನಿಸಿ, ಸ್ವಯಂಪ್ರೇರಿತವಾಗಿ ಪ್ರಕರಣ ದಾಖಲಿಸಿಕೊಂಡು ಕ್ರಮ ಕೈಗೊಳ್ಳಬೇಕು.

-ಶಾಂತವೀರ ಎಸ್., ಚಿತ್ರದುರ್ಗ

ಪ್ರತಿಕ್ರಿಯಿಸಿ (+)