ಬುಧವಾರ, ನವೆಂಬರ್ 20, 2019
22 °C

‘ಅಂಗಡಿಗಳು ದೇವರ ಹೆಸರಿನಿಂದ ಮುಕ್ತವಾಗುವುದಕ್ಕಿಂತ ಕುಡುಕರು ಚಟ ಮುಕ್ತರಾಗಲಿ’

Published:
Updated:

‘ರಾಜ್ಯದಲ್ಲಿನ ಎಲ್ಲಾ ಮದ್ಯ ಮಾರಾಟ ಕೇಂದ್ರಗಳಿಂದ ದೇವರ ಹೆಸರು ಮುಕ್ತಗೊಳಿಸಲು ಶೀಘ್ರದಲ್ಲೇ ಸುತ್ತೋಲೆ ಹೊರಡಿಸಲಾಗುವುದು’ ಎಂದು ಮುಜರಾಯಿ ಸಚಿವರು ಹೇಳಿರುವುದು ವರದಿಯಾಗಿದೆ (ಪ್ರ.ವಾ., ನ. 7). ಹೆಸರು ಯಾವುದಿದ್ದರೇನು ಮಾರುವುದು ಅದೇ ತಾನೇ? ಅಂಗಡಿಗಳು ದೇವರ ಹೆಸರಿನಿಂದ ಮುಕ್ತವಾಗುವುದಕ್ಕಿಂತ ಕುಡುಕರು ಚಟದಿಂದ ಮುಕ್ತವಾಗಬೇಕಿದೆ.

ಇದನ್ನೂ ಓದಿ: ಮದ್ಯ ಮಾರಾಟ ಕೇಂದ್ರದಿಂದ ದೇವರ ಹೆಸರು ಮುಕ್ತ: ಸಚಿವ ಕೋಟ ಶ್ರೀನಿವಾಸ ಪೂಜಾರಿ

ಕಷ್ಟಪಟ್ಟು ಬೆವರು ಸುರಿಸಿ ಸಂಪಾದಿಸಿದ ಹಣ, ಮದ್ಯಪಾಲಾಗದೆ ಕುಟುಂಬವನ್ನು ಸೇರಬೇಕಿದೆ. ಸರ್ಕಾರಕ್ಕೆ ನಿಜವಾಗಿಯೂ ಆಸಕ್ತಿಯಿದ್ದಲ್ಲಿ ಜನರನ್ನು ಚಟದಿಂದ ಮುಕ್ತಗೊಳಿಸುವ ಕಾರ್ಯಕ್ರಮಗಳನ್ನೂ ಹಮ್ಮಿಕೊಳ್ಳಲಿ. ‘ಇಲ್ಲಿಗೆ ಬರಬೇಡಿ- ಇದು ಮದ್ಯದಂಗಡಿ’ ಎಂದು ಈ ಅಂಗಡಿಗಳ ಮುಂದೆ ಬರೆಸಲಿ.
-ಪತ್ತಂಗಿ ಎಸ್. ಮುರಳಿ, ಬೆಂಗಳೂರು

ಪ್ರತಿಕ್ರಿಯಿಸಿ (+)