ಸೋಮವಾರ, ಡಿಸೆಂಬರ್ 9, 2019
20 °C

ಉಪಾಯ ಹೂಡಿದವರಿಗೆ ಸುತ್ತಿಗೆ ಏಟು!

Published:
Updated:

ತನ್ನನ್ನು ಹೊಗಳಿ ಬರೆದ ಆಸ್ಥಾನದ ಕವಿಗೆ, ಏನು ಇನಾಮು ಬೇಕೆಂದು ಕೇಳಿದ ಖಲೀಫ. ಕವಿ ಮೆಲ್ಲಗೆ ಹೇಳಿದ ‘ಹುಜೂರ್, ನಾನು ಮೆಕ್ಕಾದಲ್ಲಿ ಮದ್ಯ ಸೇವಿಸಿ ಅಮಲೇರಿ ಬಿದ್ದರೆ, ಶಿಕ್ಷೆ ವಿಧಿಸದೆ ಕ್ಷಮಿಸಬೇಕೆಂದು ಕೋರಿ ಮೆಕ್ಕಾದ ಅಮೀನನಿಗೆ ಒಂದು ಪತ್ರ ಬರೆಯಿರಿ’. ಪೇಚಿಗೆ ಸಿಕ್ಕ ಖಲೀಫ ಪತ್ರ ಬರೆದದ್ದು ಹೀಗೆ– ‘ಈ ಪತ್ರ ತಂದ ಕವಿಯೇನಾದರೂ ಮದ್ಯ ಸೇವಿಸಿದ್ದರೆ ಬಾರುಕೋಲಿನಲ್ಲಿ ಇಪ್ಪತ್ತೈದು ಏಟು ಕೊಡಿ. ಆದರೆ, ಇವನನ್ನು ಸೆರೆ ಹಿಡಿದು ತಂದವನಿಗೆ ಬಾರುಕೋಲಿನಲ್ಲಿ ನೂರು ಏಟು ಹೊಡೆಸಿರಿ’. ಅನರ್ಹ ಶಾಸಕರೆಂದು ಕರೆದರೂ ಸುಪ್ರೀಂ ಕೋರ್ಟ್ ರಾಜಕಾರಣಿಗಳಿಗೆ ಚುನಾವಣೆಯಲ್ಲಿ ಸ್ಪರ್ಧಿಸುವ ಅವಕಾಶ ನೀಡಿತು. ಸ್ಪರ್ಧಿಸದಂತೆ ಉಪಾಯ ಹೂಡಿದವರ ವಿಚಾರಕ್ಕೆ ಸುತ್ತಿಗೆ ಏಟು ಬಿತ್ತು.

ಆರ್.ವೆಂಕಟರಾಜು, ಬೆಂಗಳೂರು

ಪ್ರತಿಕ್ರಿಯಿಸಿ (+)