ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಈ ಪ್ರಶ್ನೆಗಳು ನಮ್ಮನ್ನು ಕಾಡಲೇಬೇಕಿದೆ

Last Updated 27 ನವೆಂಬರ್ 2019, 19:58 IST
ಅಕ್ಷರ ಗಾತ್ರ

ಮಹಾರಾಷ್ಟ್ರದಲ್ಲಿ ಯಾವ ಗುಂಪು ಸರ್ಕಾರ ರಚಿಸುತ್ತದೆ ಎನ್ನುವುದು ರಾಜಕಾರಣಕ್ಕೆ ಬಿಟ್ಟ ವಿಚಾರ. ಆದರೆ, ನಮ್ಮನ್ನು ಕಾಡಬೇಕಿರುವುದು ಹಲವು ದಿನಗಳಿಂದ ಅಲ್ಲಿ ಕಂಡುಬರುತ್ತಿರುವ ಸಾಂವಿಧಾನಿಕ ಮೌಲ್ಯಗಳ ಕಗ್ಗೊಲೆ ಮತ್ತು ನೈತಿಕತೆಯ ಸಾವು. ಶಾಸಕರಿಂದ ಹಿಡಿದು ರಾಷ್ಟ್ರಪತಿ ಹುದ್ದೆಯವರೆಗೂ ಹರಡಿದ ಅನೈತಿಕತೆಯುಪ್ರಜಾತಂತ್ರ ವ್ಯವಸ್ಥೆಯನ್ನೇ ಅಣಕಿಸುವಂತಿದೆ. ರಾಜ್ಯಪಾಲರ ಕಚೇರಿಯು ಹೈಕಮಾಂಡಿನ ಶಾಖೆ ಎಂದು ಕಾಂಗ್ರೆಸ್ ಆಡಳಿತಾವಧಿಯಲ್ಲಿ ಟೀಕಿಸುತ್ತಿದ್ದ ಬಿಜೆಪಿಯ ಹಿರಿಯ ನಾಯಕರು ಈಗೇಕೋ ತೆಪ್ಪಗಾಗಿಬಿಟ್ಟಿದ್ದಾರೆ. ಕಾಂಗ್ರೆಸ್ ಮಾಡಿಲ್ಲವೇ ಎನ್ನುವ ಪ್ರಶ್ನೆಯೇ ಅನೈತಿಕತೆಯ ಸಮರ್ಥನೆಯಾಗಿಬಿಟ್ಟಿದೆ.

ಮತದಾರರ ತೀರ್ಪು ನಗಣ್ಯವಾಗುತ್ತಿದೆ. ಮತ ನೀಡುವುದಷ್ಟೇ ನಿಮ್ಮ ಕೆಲಸ, ನಾವು ಯಾವುದೋ ಒಂದು ಗೂಡು ಸೇರಿ ಆಡಳಿತ ನಡೆಸುತ್ತೇವೆ ಎಂದು ಜನಪ್ರತಿನಿಧಿಗಳು ಸ್ಪಷ್ಟ ಸಂದೇಶ ನೀಡುತ್ತಿದ್ದಾರೆ.ಆಯ್ಕೆಯಾದ ನಂತರ ಎಲ್ಲಿದ್ದರೇನಂತೆ, ಅಧಿಕಾರ ಮುಖ್ಯ ಎನ್ನುವ ಧೋರಣೆಯನ್ನು ರಾಜಕೀಯ ನಾಯಕರು ಅನುಸರಿಸುತ್ತಿದ್ದಾರೆ. ಕರ್ನಾಟಕದಲ್ಲೂ ಇದೇ ಅಸಹ್ಯ ರಾಜಕಾರಣವನ್ನು ಕಾಣುತ್ತಿದ್ದೇವೆ. ನಾವು ಏನನ್ನು ಬಯಸುತ್ತಿದ್ದೇವೆ? ಕೇವಲ ನಮಗಿಷ್ಟವಾದ ಪಕ್ಷದ ಆಡಳಿತವನ್ನೋ ಅಥವಾ ಪ್ರಜಾತಂತ್ರ ವ್ಯವಸ್ಥೆಯ, ಮೌಲ್ಯಗಳ ರಕ್ಷಣೆಯನ್ನೋ? ನಮ್ಮ ಅಭಿಪ್ರಾಯವನ್ನು ದಾಖಲಿಸುವ ಮಾರ್ಗವಾದರೂ ಎಲ್ಲಾದರೂ ಇದೆಯೇ? ಇಷ್ಟು ಅಸಹ್ಯ ರಾಜಕಾರಣವನ್ನು ಸಹಿಸಿಕೊಂಡಿರಬೇಕೇ? ಅನ್ಯ ಮಾರ್ಗವಾದರೂ ಏನು? ಈ ಪ್ರಶ್ನೆಗಳು ನಮ್ಮನ್ನು ಕಾಡಲೇಬೇಕಿದೆ. ಇಲ್ಲವಾದರೆ ಸಂವಿಧಾನದ ಬಗ್ಗೆ ಮಾತನಾಡುವ ನೈತಿಕ ಹಕ್ಕು ನಮಗೆ ಇರಲು ಸಾಧ್ಯವೇ ಇಲ್ಲ.

ದಿವಾಕರ್‌ ಎನ್‌., ಮೈಸೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT