ಸೋಮವಾರ, ಜನವರಿ 20, 2020
25 °C

ಕಲಾವಿದರ ಗೌರವದ ಪ್ರಶ್ನೆ

ವಾಚಕರವಾಣಿ Updated:

ಅಕ್ಷರ ಗಾತ್ರ : | |

ಕರ್ನಾಟಕ ನಾಟಕ ಅಕಾಡೆಮಿಯ ನಿಕಟಪೂರ್ವ ಅಧ್ಯಕ್ಷರು ಕನ್ನಡ ಮತ್ತು ಸಂಸ್ಕೃತಿ ಸಚಿವ ಸಿ.ಟಿ.ರವಿ ಅವರನ್ನು ಭೇಟಿ ಮಾಡಿ, ತಮ್ಮ ಅವಧಿಯಲ್ಲಿ ಆಯ್ಕೆ ಮಾಡಿದ ರಂಗಸಾಧಕರ ಪ್ರಶಸ್ತಿ ಪಟ್ಟಿ ಹಾಗೂ ಪ್ರಸ್ತುತ ನಾಟಕ ಅಕಾಡೆಮಿಯ ಅಧ್ಯಕ್ಷರ ನೇತೃತ್ವದ ಸಮಿತಿ ಪ್ರಕಟಿಸಿರುವ ಪಟ್ಟಿ ಎರಡನ್ನೂ ಮಾನ್ಯ ಮಾಡಿ ಸಾಧಕರಿಗೆ ಪ್ರಶಸ್ತಿ ನೀಡುವಂತೆ ಮನವಿ ಮಾಡಿರುವುದಾಗಿ ಪತ್ರಿಕೆಗಳಲ್ಲಿ ವರದಿ ಆಗಿದೆ.

ಬಹಳ ಮುಖ್ಯವಾಗಿ ಇಲ್ಲಿ ಎದುರಾಗಿರುವುದು ಕಲಾವಿದರ ಗೌರವದ ಪ್ರಶ್ನೆ. ಈ ಬೇಡಿಕೆಯನ್ನು ಸಚಿವರು ಒಪ್ಪಿದರೆ, ನಡಾವಳಿಯಲ್ಲಿ ಏನೇ ಸಮಸ್ಯೆ ಆದರೂ ಸರ್ಕಾರ ನೋಡಿಕೊಳ್ಳುತ್ತದೆ ಎಂಬ ಧೋರಣೆಯನ್ನು ಸಾಂಸ್ಕೃತಿಕ ಅಕಾಡೆಮಿಗಳು ಮುಂಬರುವ ದಿನ‌ಗಳಲ್ಲಿ ತಾಳಬಹುದು! ಭವಿಷ್ಯದಲ್ಲಿ ಸಾಂಸ್ಕೃತಿಕ ಬಿಕ್ಕಟ್ಟು ಎದುರಾಗದಂತೆ ಸಚಿವರು ನಿರ್ಧಾರ ತೆಗೆದುಕೊಳ್ಳಬೇಕು. ಪ್ರಶಸ್ತಿಯ ಮೌಲ್ಯಗಳಿಂದಾಚೆಗೆ ಸಾಂಸ್ಕೃತಿಕ ಕ್ಷೇತ್ರದ ಘನತೆ ಬಹಳ ಮುಖ್ಯವಾಗುತ್ತದೆ.

‌–ಆರ್.ವೆಂಕಟರಾಜು, ಬೆಂಗಳೂರು

 

ಇನ್ನಷ್ಟು...

ನಾಟಕ ಅಕಾಡೆಮಿ ಪ್ರಶಸ್ತಿ ರದ್ದು

ನಾಟಕ ಅಕಾಡೆಮಿ: ಪ್ರಶಸ್ತಿ ಪಟ್ಟಿ ಪರಿಷ್ಕರಣೆ ಬೇಡ  

ನಾಟಕ ಅಕಾಡೆಮಿ ಪ್ರಶಸ್ತಿ ವಾಪಸ್: ರಂಗಕರ್ಮಿ ಬನ್ನಾಡಿ

 

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು