ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಕಾರಾತ್ಮಕ ಸುದ್ದಿಯಿಂದ ಸಾಧಕರ ಸೃಷ್ಟಿ

Last Updated 14 ಫೆಬ್ರುವರಿ 2020, 19:45 IST
ಅಕ್ಷರ ಗಾತ್ರ

‘ಪ್ರಜಾವಾಣಿ’ಯು ಗುರುತಿಸಿ, ಪುರಸ್ಕರಿಸಿರುವ ಯುವ ಸಾಧಕರ ಬಗ್ಗೆ ಓದಿ (ಪ್ರ.ವಾ., ಫೆ. 14) ಬಹಳ ಸಂತಸವಾಯಿತು. ‘ಬಹುಪಾಲು ಜನರು ವ್ಯವಸ್ಥೆಯನ್ನು ದೂಷಿಸುವುದರಲ್ಲೇ ಕಾಲಕಳೆಯುವಾಗ, ತಮ್ಮ ಹೊಸ ಆಲೋಚನೆಗಳ ಮೂಲಕ ವ್ಯವಸ್ಥೆಯಲ್ಲಿ ಬದಲಾವಣೆ ತರಲು ಶ್ರಮಿಸಿದವರು ಇವರು’ ಎಂದು ಸಾಧಕರನ್ನು ಶ್ಲಾಘಿಸಿರುವುದು ಖಂಡಿತ ಸರಿ.

ಸಕಾರಾತ್ಮಕ ಕ್ರಿಯೆಗಳಿಗೆ, ಸಕಾರಾತ್ಮಕ ಚಿಂತನೆಗಳು ಮೂಲ. ನಕಾರಾತ್ಮಕ ಆಲೋಚನೆಗಳು, ನಕಾರಾತ್ಮಕ ಕ್ರಿಯೆಗಳನ್ನೇ ಹುಟ್ಟುಹಾಕುತ್ತವೆ. ಜನರಲ್ಲಿ ಒಳ್ಳೆಯ ಚಿಂತನೆಗಳನ್ನು ಪ್ರೇರೇಪಿಸುವಲ್ಲಿ ಸಮೂಹ ಮಾಧ್ಯಮಗಳ ಪಾತ್ರ ಹಿರಿದು. ಆದ್ದರಿಂದ ಸಮೂಹ ಮಾಧ್ಯಮಗಳು ರಾಜಕೀಯ, ಸಾಮಾಜಿಕ, ಧಾರ್ಮಿಕ, ಆರ್ಥಿಕ ಮುಂತಾದ ಕ್ಷೇತ್ರಗಳಲ್ಲಿನ ಅವ್ಯವಸ್ಥೆಯನ್ನು ಎತ್ತಿ ತೋರಿಸುವುದರ ಜೊತೆಗೆ, ಸಕಾರಾತ್ಮಕ ಸುದ್ದಿಗಳಿಗೆ ಪ್ರಾಮುಖ್ಯ ಕೊಟ್ಟರೆ ಅದೆಷ್ಟೋ ಸಾಧಕರನ್ನು ಸೃಷ್ಟಿಸಬಹುದು.

ಫಾ. ಎಡ್ವರ್ಡ್‌ ರೋಡ್ರಿಗಸ್ ಎಸ್.ಜೆ., ಬೆಂಗಳೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT