ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗುಂಡಿಡುವ ಆದೇಶ ಎಷ್ಟು ಸರಿ?

Last Updated 2 ಮಾರ್ಚ್ 2020, 20:00 IST
ಅಕ್ಷರ ಗಾತ್ರ

ನರಹಂತಕ ಚಿರತೆಗೆ ಕಂಡಲ್ಲಿ ಗುಂಡಿಡಲು‌ ಅರಣ್ಯ ಸಚಿವರು ಆದೇಶಿಸಿದ್ದಾರೆ (ಪ್ರ.ವಾ., ಮಾರ್ಚ್‌ 2). ಸಚಿವರಈ ನಿರ್ಧಾರ ಆ ಕ್ಷಣಕ್ಕೆ ಸರಿಯೆನಿಸಬಹುದು.

ಆದರೆ ಚಿರತೆಗಳೇಕೆ ನರಹಂತಕಗಳಾಗಿ ಬದಲಾಗುತ್ತವೆ ಎಂಬ ಪ್ರಶ್ನೆಗೆ ಉತ್ತರ ಕಂಡುಕೊಳ್ಳಬೇಕಾದ ಅವಶ್ಯಕತೆ ಇದೆ. ಇಂತಹ ಸ್ಥಿತಿಗೆ ನೇರ ಕಾರಣ ಅರಣ್ಯ ನಾಶ, ನದಿಮೂಲಗಳ‌ ನಾಶ, ಅರಣ್ಯದೊಳಗೆ ನಡೆಯುವ ಗಣಿಗಾರಿಕೆ, ಒತ್ತುವರಿ, ಚಿರತೆಗಳ ಆವಾಸಸ್ಥಾನಕ್ಕೆಧಕ್ಕೆ ಮುಂತಾದವು. ಇವುಗಳನ್ನು ತಡೆಯದಿದ್ದರೆ ಮಾಂಸಾಹಾರಿ ಪ್ರಾಣಿಗಳು ನರಹಂತಕಗಳಾಗಿ ಬದಲಾಗುತ್ತವೆ. ಚಿರತೆಗಳನ್ನು ಹೀಗೆ ನಾವೇ ನರಹಂತಕಗಳಾಗಿ ಬದಲಾಯಿಸಿ, ಈಗ ಕಂಡಲ್ಲಿ ಗುಂಡಿಡಲು ನಾವೇ ಆದೇಶಿಸುವುದು ಎಷ್ಟು ಸರಿ?

ಆದ್ದರಿಂದ ಚಿರತೆಗೆ ಕಂಡಲ್ಲಿ ಗುಂಡಿಡುವ ಬದಲು, ಅರಿವಳಿಕೆ ನೀಡಿ ಜೀವಂತವಾಗಿ ಸೆರೆಹಿಡಿಯಲು ಆದೇಶಿಸಬೇಕು. ಹೀಗೆ ಹಿಡಿಯಲಾದ ಚಿರತೆಯನ್ನು ಬೇರೆ ಕಾಡಿಗೆ ವರ್ಗಾಯಿಸದೇ ಪ್ರಾಣಿ ಸಂಗ್ರಹಾಲಯದಲ್ಲಿ ಆಶ್ರಯ ಕಲ್ಪಿಸಬೇಕು. ಅದನ್ನು ಬಿಟ್ಟು, ಮನುಷ್ಯರಿಗೆ ತೊಂದರೆ ನೀಡುತ್ತವೆ ಎಂಬ ಕಾರಣಕ್ಕೆ ಪ್ರತಿ ಪ್ರಾಣಿಗೂ ಕಂಡಲ್ಲಿ ಗುಂಡಿಡುತ್ತಾ ಹೋದರೆ ಅದಕ್ಕೆ ಕೊನೆಯೆಲ್ಲಿದೆ?
-ಮಹೇಶ್ವರ ಹುರುಕಡ್ಲಿ, ಬಾಚಿಗೊಂಡನಹಳ್ಳಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT