ಮಂಗಳವಾರ, ಮಾರ್ಚ್ 31, 2020
19 °C

ಇಂದಿರಾ ಕ್ಯಾಂಟೀನ್‌: ದರ ಏರಿಕೆ ಚಿಂತನೆ ಸರಿಯಲ್ಲ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಇಂದಿರಾ ಕ್ಯಾಂಟೀನ್‌ನ ಉಪಾಹಾರ ಮತ್ತು ಊಟದ ದರ ಏರಿಸಬೇಕೆಂದು ಪಾಲಿಕೆ ಆಯುಕ್ತರು ಮೇಯರ್‌ಗೆ ಮೌಖಿಕ ಪ್ರಸ್ತಾವ ಸಲ್ಲಿಸಿರುವುದು ಸರಿಯಲ್ಲ. ಉಪಾಹಾರದ ದರವನ್ನು ₹ 5ರಿಂದ ₹ 10ಕ್ಕೆ ಹಾಗೂ ಊಟದ ದರವನ್ನು ₹ 10ರಿಂದ 15ಕ್ಕೆ ಏರಿಸಲು ಪಾಲಿಕೆ ನಡೆಸುತ್ತಿರುವ ಚಿಂತನೆಯೇನಾದರೂ ಜಾರಿಗೆ ಬಂದರೆ, ಬಡವರು ಮತ್ತು ಜನಸಾಮಾನ್ಯರ ಮೇಲೆ ಪ್ರಹಾರ ನಡೆಸಿದಂತೆ ಆಗುತ್ತದೆ. ‌

ಇಂದಿರಾ ಕ್ಯಾಂಟೀನ್‌ಗೆ ಬಡವರು, ಕೂಲಿ ಕಾರ್ಮಿಕರು ಸೇರಿದಂತೆ ಕಡಿಮೆ ಆದಾಯವುಳ್ಳ ಹಲವರು ಹೋಗುತ್ತಿದ್ದಾರೆ. ಅಲ್ಲಿ ಊಟ, ಉಪಾಹಾರದ ದರ ಏರಿಕೆಯಾದರೆ ಅವರೆಲ್ಲ ಇತರೆಡೆಗೆ ಧಾವಿಸಬೇಕಾಗುತ್ತದೆ. ಆಗ ಇಂದಿರಾ ಕ್ಯಾಂಟೀನ್ ಅನ್ನು ಮುಚ್ಚುವ ಪ್ರಸಂಗ ಬರಬಹುದು. ಇಂತಹ ಜನವಿರೋಧಿ ಪ್ರಸ್ತಾವವನ್ನು ಒಪ್ಪದೆ, ಹೆಚ್ಚಿನ ದರ ನಿಗದಿಪಡಿಸುವ ಚಿಂತನೆಯಿಂದ ಬಿಬಿಎಂಪಿ ಹಿಂದೆ ಸರಿಯಬೇಕು.

-ಐ.ಎಚ್.ಇಟಗಿ, ಬೆಂಗಳೂರು

 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)