ಸೋಮವಾರ, ಮಾರ್ಚ್ 30, 2020
19 °C

ಸುರಕ್ಷೆಗೆ ಸಿಗಲಿ ಇನ್ನಷ್ಟು ಒತ್ತು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ರೈಲು ಬೋಗಿಗಳಲ್ಲಿ ಸುರಕ್ಷೆಗೆ ಸಂಬಂಧಿಸಿದ ಕ್ರಮಗಳನ್ನು ಹೆಚ್ಚಿಸುವುದು ಅಗತ್ಯವಾಗಿದೆ. ಇತ್ತೀಚೆಗೆ ನಾನು ತಿರುಪತಿಯಿಂದ ಹೈದರಾಬಾದ್‌ಗೆ ರೈಲಿನಲ್ಲಿ ಪ್ರಯಾಣ ಮಾಡಿದೆ. ಸಿಕಿಂದರಾಬಾದ್‌ನಲ್ಲಿ ಎಲ್ಲಾ ಪ್ರಯಾಣಿಕರು ಇಳಿದರು. ನಮ್ಮ ಬೋಗಿಯಲ್ಲಿ ನಾನು, ನನ್ನ ವಯಸ್ಸಾದ ಅಮ್ಮ ಮತ್ತು ನನ್ನ ಚಿಕ್ಕ ಮಗ ಇಷ್ಟೇ ಜನ ಇದ್ದೆವು. ಭದ್ರತಾ ಸಿಬ್ಬಂದಿ ಯಾರೂ ಕಾಣಿಸಲಿಲ್ಲ.

ತುಂಬಾ ಭಯವಾಯಿತು. ಯಾರಾದರೂ ಇರಬಹುದೇನೋ ಎಂದು ಅಕ್ಕಪಕ್ಕದ ಮೂರು–ನಾಲ್ಕು ಬೋಗಿಗಳಲ್ಲಿ ಹುಡುಕಿದೆ. ಒಂದು ಬೋಗಿಯಲ್ಲಿ ಪುರುಷರೊಬ್ಬರು ಕುಳಿತಿದ್ದರು. ಮತ್ತೆ ಯಾರು ಇರಲಿಲ್ಲ. ನಾವೂ ಅವರೊಟ್ಟಿಗೆ ಕುಳಿತು ಹೈದರಾಬಾದ್‌ವರೆಗೆ ಪ್ರಯಾಣಿಸಿದೆವು. ಅಂತಹ ಸಂದರ್ಭದಲ್ಲಿ ಒಂದಿಬ್ಬರು ಭದ್ರತಾ ಸಿಬ್ಬಂದಿ ಇದ್ದರೆ ಧೈರ್ಯ ಮೂಡುತ್ತದೆ.
-ಗೀತಾ, ಬೀದರ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)