ಮಂಗಳವಾರ, ಜೂನ್ 2, 2020
27 °C

ಕನ್ನಡ ಸೊರಗುತ್ತಿರುವುದೇಕೆ?

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಈ ಬಾರಿಯ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಪ್ರಯುಕ್ತ ಗಣ್ಯರ ವಾಹನಗಳಿಗೆ ನೀಡಿದ್ದ ಅನುಮತಿ ಪತ್ರದಲ್ಲಿ ‘ಕಾರ್ಯಧ್ಯಕ್ಷರು’ ಎಂದು ಮುದ್ರಿಸಲಾಗಿತ್ತು. ಇದನ್ನು ಕಣ್ತಪ್ಪಿನಿಂದಾದ ಮುದ್ರಣ ದೋಷ ಇರಬಹುದೆಂದು ಕ್ಷಮಿಸಬಹುದು. ಆದರೆ ಆಕಾಶವಾಣಿಯಿಂದ ಬಿತ್ತರಗೊಳ್ಳುವ ಕನ್ನಡ ಭಾಷೆಯಲ್ಲಿ ‘ಆಕಾಶವಾಣಿ ಧಾರವಾಡ’ ಎಂಬುದನ್ನು ‘ಆಕಾಶವಾಣಿ ಧಾರವಾಡ್‌’ ಎಂದು ಉಚ್ಚರಿಸುವುದಕ್ಕೆ ಏನೆಂದು ಹೇಳುವುದು? ಈ ಕುರಿತು ಆಕಾಶವಾಣಿಗೆ ಸಾಕಷ್ಟು ಪತ್ರಗಳನ್ನು ಬರೆದಿದ್ದರೂ ಪ್ರಯೋಜನವಾಗಿಲ್ಲ.

ಹೀಗೆಯೇ, ವಿದ್ಯುತ್‌ ಸ್ಪರ್ಶಕ್ಕೆ ಒಳಗಾದವರನ್ನು ‘ಕಡ್ಡಿಯಿಂದ ನೂಕಿರಿ’ ಎಂಬುದನ್ನು ಕೇಳಿ, ಆಕಾಶವಾಣಿಯ ಬೆಂಗಳೂರಿನ ಅಧಿಕಾರಿಗಳಿಗೆ ‘ಕಡ್ಡಿ ಅಲ್ಲ, ಒಣಗಿದ ಕಟ್ಟಿಗೆ’ ಎಂದು ಪತ್ರ ಬರೆದಿದ್ದೆ. ಅವರು ಸುಧಾರಿಸಿಕೊಂಡು ಈಗ ‘ಒಣಗಿದ ಕಟ್ಟಿಗೆಯಿಂದ ನೂಕಿರಿ’ ಎಂದು ಹೇಳುತ್ತಿದ್ದಾರೆ.

‘ಸಂಗೀತಗಾರರ ಪ್ರತಿಭೆಯನ್ನು ಓರೆ ಹಚ್ಚಿ ನೋಡುವುದು’ ಎಂದು ಆಕಾಶವಾಣಿಯಲ್ಲಿ ಪ್ರಸಾರ ಆಗುತ್ತಿತ್ತು. ‘ಓರೆ ಅಲ್ಲ, ಅದು ಒರೆಗೆ ಹಚ್ಚುವುದು’ ಎಂದು ಮೇಲಿಂದ ಮೇಲೆ ಪತ್ರ ಬರೆದರೂ ತಿದ್ದಿಕೊಳ್ಳಲಿಲ್ಲ. ಹೀಗಾದರೆ ಕನ್ನಡ ಭಾಷೆಯ ಅಳಿವು ಉಳಿವಿನ ಪ್ರಶ್ನೆಯು ಪ್ರಶ್ನೆಯಾಗಿಯೇ ಉಳಿಯುವುದರಲ್ಲಿ ಸಂಶಯವಿಲ್ಲ ಎನಿಸುತ್ತದೆ.

-ಬಸವರಾಜ ಡಿ. ಕುಡಚಿ, ಬೆಳಗಾವಿ

 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.