ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯುಟ್ಯೂಬ್ ಚಾನೆಲ್: ಸೃಜನಶೀಲ ಆಗಿರಲಿ

Last Updated 8 ಏಪ್ರಿಲ್ 2020, 19:45 IST
ಅಕ್ಷರ ಗಾತ್ರ

ಮನೆಯಲ್ಲಿ ಮಕ್ಕಳು ಬೇಸರ ಕಳೆಯಲು ಅನುವಾಗುವಂತೆ ಶಿಕ್ಷಣ ಇಲಾಖೆಯು ಯುಟ್ಯೂಬ್ ಚಾನೆಲ್ ಆರಂಭಿಸಲು ಮುಂದಾಗಿರುವುದು ಸ್ವಾಗತಾರ್ಹ. ಇದು, ಮಕ್ಕಳ ಕ್ರಿಯಾಶೀಲತೆ, ಸೃಜನಶೀಲತೆ ಅಭಿವ್ಯಕ್ತಗೊಳಿಸುವ, ಜ್ಞಾನ ವೃದ್ಧಿಸುವ ಅತ್ಯುತ್ತಮ ಸಂವಹನ ಮಾಧ್ಯಮವಾಗಬೇಕು.

ಶಿಕ್ಷಕರು ಹಾಗೂ ಶಿಕ್ಷಣ ಪ್ರೇಮಿಗಳು ಸ್ವಯಂಪ್ರೇರಣೆಯಿಂದ 5-10 ನಿಮಿಷಗಳ ವಿಡಿಯೊ ಸಿದ್ಧಪಡಿಸುವಂತೆ ಶಿಕ್ಷಣ ಸಚಿವರು ಮನವಿ
ಮಾಡಿದ್ದಾರೆ. ಬಹುತೇಕರಿಗೆ ಥೀಮ್ ಗೊತ್ತಿದ್ದರೂ ಕಿರುಚಿತ್ರ ತಯಾರಿಸುವ ಕ್ರಿಯಾಶೀಲ ತಂತ್ರಜ್ಞಾನ ಗೊತ್ತಿರಲಾರದು. ಹೀಗಾಗಿ, ಯಾವ ಪರಿಕಲ್ಪನೆಯ ಥೀಮ್‌ಗಳನ್ನು ಆಧರಿಸಿ ವಿಡಿಯೊಗಳನ್ನು ಹೇಗೆ ರೂಪಿಸಬೇಕು ಎನ್ನುವ ನೀಲನಕ್ಷೆ ಸಿದ್ಧಪಡಿಸಿಕೊಳ್ಳುವುದು ಉತ್ತಮ. ಜೊತೆಗೆ ಈ ವಿಡಿಯೊಗಳು ಬರೀ ಮಾಹಿತಿ ಬಿತ್ತರಿಸುತ್ತಾ ಬೋರ್ ಹೊಡೆಸುವಂತೆ ಇರಬಾರದು. ಆಟ, ಮೋಜು, ಪರಸ್ಪರ ಸಂವಹನ ಸಾಧ್ಯವಾದರೆ, ಮಕ್ಕಳು ಆಸಕ್ತಿ, ಕುತೂಹಲದಿಂದ ನೋಡುತ್ತಾರೆ.

- ಪ್ರಹ್ಲಾದ್ ವಾ. ಪತ್ತಾರ, ಯಡ್ರಾಮಿ, ಕಲಬುರ್ಗಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT