ಶುಕ್ರವಾರ, ಮೇ 29, 2020
27 °C

ಕುಶಲಕರ್ಮಿಗಳ ಬದುಕು ಮುಳುಗದಿರಲಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಲಾಕ್‌ಡೌನ್‌ನಿಂದ ದೇಶದಾದ್ಯಂತ ಚಿನ್ನಾಭರಣ ಮಳಿಗೆಗಳು ಮುಚ್ಚಿದ್ದು, ಆಭರಣ ತಯಾರಕರು, ಕುಶಲಕರ್ಮಿಗಳು ಜೀವನ ನಡೆಸುವುದು ಕಷ್ಟವಾಗಿದೆ. ಆಭರಣ ತಯಾರಕರು ತಮ್ಮ ಕುಲಕಸುಬನ್ನು ಅವಲಂಬಿಸಿ ಜೀವನ ನಡೆಸುತ್ತಿರುತ್ತಾರೆ. ತಮ್ಮ ಬಳಿ ಹಣವಿಲ್ಲದೇ ಇರುವ ಈ ಸ್ಥಿತಿಯಲ್ಲಿ ಜನ ಚಿನ್ನಾಭರಣ ಕೊಳ್ಳುವರೇ? ಲಾಕ್‌ಡೌನ್‌ ಮುಗಿದ ಬಳಿಕವೂ ಸುಮಾರು ಎರಡು ತಿಂಗಳ ಕಾಲ ಇದೇ ಪರಿಸ್ಥಿತಿ ಮುಂದುವರಿಯುವ ಸಾಧ್ಯತೆ ಇರುತ್ತದೆ.

ಆಭರಣ ತಯಾರಕರ ಮಕ್ಕಳು ಕುಟುಂಬದ ವೃತ್ತಿಯನ್ನು ಮುಂದುವರಿಸಲು ಹಿಂದೇಟು ಹಾಕುತ್ತಿದ್ದು, ಸಾಂಸ್ಕೃತಿಕ ಹಿನ್ನಡೆಗೆ ಕಾರಣವಾಗುತ್ತಿದೆ. ಈ ನಡುವೆ, ಬೆಳ್ಳಿ ಬಂಗಾರದ ದರವೂ ಹೆಚ್ಚಾಗುತ್ತಿದೆ. ಇದರಿಂದ ನುರಿತ ಕುಶಲಕರ್ಮಿಗಳೇ ಕೈಕಟ್ಟಿ ಕುಳಿತಿದ್ದಾರೆ. ಜೊತೆಗೆ, ಬೇರೆ ವೃತ್ತಿಯನ್ನು ಆರಂಭಿಸಲು ಅವರು ಸೌಲಭ್ಯವಂಚಿತರಾಗಿದ್ದಾರೆ. ಇದನ್ನೆಲ್ಲ ಮನಗಂಡು, ಕುಶಲಕರ್ಮಿಗಳ ಬದುಕು ಮುಳುಗದಂತೆ ಸರ್ಕಾರ ಪರಿಹಾರ ಕ್ರಮಗಳನ್ನು ಕೈಗೊಳ್ಳಬೇಕು.

-ಹೇಮಲತಾ ಆಚಾರ್, ಹಿರಿಯೂರು

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.