ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಾಲಿಕೆಗೊಂದು ಪರೋಕ್ಷ ಕಾನೂನಿದೆಯೇ?

Last Updated 14 ಜೂನ್ 2020, 19:30 IST
ಅಕ್ಷರ ಗಾತ್ರ

ಬೃಹತ್‌ ಬೆಂಗಳೂರು ಮಹಾನಗರಪಾಲಿಕೆಯು (ಬಿಬಿಎಂಪಿ) ಸ್ವಚ್ಛತೆ ಕಾಪಾಡುವುದಕ್ಕೆ ಸಂಬಂಧಿಸಿದ ನಿಯಮವನ್ನು ಕಟ್ಟುನಿಟ್ಟಾಗಿ ಜಾರಿಗೆ ತಂದು, ತಪ್ಪಿದರೆ ದಂಡ ವಿಧಿಸುವುದಾಗಿ ಪ್ರಕಟಿಸಿದೆ. ಇದು ಸರಿಯಾಗಿಯೇ ಇದೆ. ಆದರೆ ಸಾರ್ವಜನಿಕ ಸ್ವಚ್ಛತೆ ಕಾಪಾಡುವ ಕೆಲಸವು ನಾಗರಿಕರು ಮತ್ತು ಪಾಲಿಕೆಯವರು ಎರಡೂ ಕಡೆಯಿಂದ ಆಗಬೇಕಲ್ಲವೇ?

ಕಸವನ್ನು ಎರಡು, ಮೂರು ಅಥವಾ ಕೆಲವು ಬಾರಿ ನಾಲ್ಕು ದಿನಗಳಿಗೊಮ್ಮೆ ಸಂಗ್ರಹಿಸುವುದು, ಒಣ ಕಸ ಮತ್ತು ಹಸಿ ಕಸವನ್ನು ಒಟ್ಟಿಗೆ ಒಂದೇ ವಾಹನದಲ್ಲಿ ಒಯ್ಯುವುದು, ಒಯ್ಯುವಾಗ ರಸ್ತೆಯಲ್ಲೆಲ್ಲಾ ಚೆಲ್ಲುವುದು, ಎಷ್ಟೋ ಕಡೆ ರಸ್ತೆ ಸ್ವಚ್ಛತೆ ಹಾಗೂ ಕೊಳೆಗೇರಿಗಳ ಸ್ವಚ್ಛತೆಗೆ ಗಮನಹರಿಸದಿರುವುದು... ಇಂತಹ ಎಡವಟ್ಟುಗಳು ಒಂದೇ ಎರಡೇ. ಪಾಲಿಕೆಯವರು ತಮ್ಮಲ್ಲಿನ ಇಂತಹ ಲೋಪದೋಷಗಳನ್ನು ಸರಿಪಡಿಸಿಕೊಳ್ಳದೇ ನಿವಾಸಿಗಳನ್ನು ಬೆದರಿಸುವುದು ಯಾವ ನ್ಯಾಯ? ನಗರವಾಸಿಗಳಿಗೊಂದು ಪ್ರತ್ಯಕ್ಷ ಕಾನೂನು, ಆಡಳಿತ ವ್ಯವಸ್ಥೆಗೊಂದು ಪರೋಕ್ಷ ಕಾನೂನು ಇರುತ್ತದೆಯೇ?

ಕೆ.ಎಸ್.ಜೆ.ಗುಪ್ತ, ಬೆಂಗಳೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT