ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತೇಜೋವಧೆ ತರವಲ್ಲ

ಅಕ್ಷರ ಗಾತ್ರ

ರಾಜರಾಜೇಶ್ವರಿನಗರದ ಉಪಚುನಾವಣೆಯಲ್ಲಿ ಸ್ಪರ್ಧಿಸಿರುವ ಕುಸುಮಾ ಅವರ ಬಗ್ಗೆ ಕೆಲವು ನಾಯಕರ ಹೇಳಿಕೆಗಳು ಹಾಗೂ ಮಾಧ್ಯಮಗಳಲ್ಲಿ ಕೆಲವೆಡೆ ಬರುತ್ತಿರುವ ವರದಿಗಳು ಅವಹೇಳನದ ನೆಲೆಯಲ್ಲಿವೆ. ಡಿ.ಕೆ.ರವಿ ಅವರ ಅಕಾಲಿಕ ಮರಣದಿಂದ ಹೆಚ್ಚು ನಷ್ಟಕ್ಕೊಳಗಾಗಿದ್ದು ಅವರ ಪತ್ನಿ ಕುಸುಮಾ ಎಂಬುದನ್ನು ಮರೆತಿದ್ದೇವೆ. ಚಿಕ್ಕ ವಯಸ್ಸಿಗೇ ಪತಿಯನ್ನು ಕಳೆದುಕೊಂಡ ಹೆಣ್ಣುಮಗಳ ಬಗ್ಗೆ ಇಲ್ಲಸಲ್ಲದ ಮಾತನಾಡುವುದು ಸರಿಯಲ್ಲ. ರವಿಯವರ ಮರಣದ ಸಂದರ್ಭದಲ್ಲಿ ಸಹ ಕುಸುಮಾ ಸಮಚಿತ್ತತೆ ಕಾಯ್ದುಕೊಂಡರು. ರವಿಯವರು ತಮ್ಮ ಬ್ಯಾಚ್‌ಮೇಟ್ಮಹಿಳೆಯೊಬ್ಬರಿಗೆ ಕಳಿಸಿದ್ದ ವಾಟ್ಸ್‌ಆ್ಯಪ್‌ ಸಂದೇಶಗಳು ಪತ್ರಿಕೆಗಳಲ್ಲಿ ಬಹಿರಂಗವಾದಾಗಲೂ ರವಿಯವರನ್ನು ಕುಸುಮಾ ಸಮರ್ಥಿಸಿಕೊಂಡರು. ಅಮೆರಿಕಕ್ಕೆ ಹೋಗಿ ವಿದ್ಯಾಭ್ಯಾಸ ಮುಂದುವರಿಸಿ, ಹಿಂದಿರುಗಿ ಬಂದು ಕಾಲೇಜಿ ನಲ್ಲಿ ಉಪನ್ಯಾಸಕಿಯಾಗಿ ಕೆಲಸ ಮಾಡುತ್ತಿರುವ ಕುಸುಮಾ ಅವರ ಮನೋಸ್ಥೈರ್ಯವನ್ನು ಅಭಿನಂದಿಸಬೇಕು. ಬದುಕಿನಲ್ಲಿ ಇಷ್ಟು ಚಿಕ್ಕ ವಯಸ್ಸಿಗೇ ಅವರು ಅನುಭವಿಸಿದ ಕಷ್ಟಗಳ ಬಗ್ಗೆ ಸಹಾನುಭೂತಿ ತೋರುವುದು ಬಿಟ್ಟು, ಅವರ ತೇಜೋವಧೆ ಮಾಡುವುದು ತರವಲ್ಲ.

- ಡಾ. ಟಿ.ಜಯರಾಂ, ಕೋಲಾರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT