ಶುಕ್ರವಾರ, ಅಕ್ಟೋಬರ್ 23, 2020
27 °C

ಆರೋಗ್ಯಕರ ವಿಮರ್ಶೆ ಒಳಿತು

ವಾಚಕರ ವಾಣಿ Updated:

ಅಕ್ಷರ ಗಾತ್ರ : | |

ಇತ್ತೀಚಿನ ದಿನಗಳಲ್ಲಿ ದೇಶದಲ್ಲಿ ವಾಸ್ತವಾಂಶಗಳನ್ನು ಸ್ವೀಕರಿಸುವವರ ಮನಃಸ್ಥಿತಿಯಲ್ಲಿ ಬದಲಾವಣೆ ಕಂಡು ಬರುತ್ತಿದೆ. ಜನರಿಗೆ ವಾಸ್ತವಕ್ಕಿಂತ ಭ್ರಮೆಯ ಬದುಕೇ ಹೆಚ್ಚು ಆಕರ್ಷಣೀಯವಾಗಿದೆ. ವಿವಿಧ ಸಂಸ್ಥೆಗಳ ಸಮೀಕ್ಷೆಗಳು, ವರದಿಗಳನ್ನು ತಮ್ಮ ಮೂಗಿನ ನೇರಕ್ಕೆ ವ್ಯಾಖ್ಯಾನಿಸುವ ಪರಿಪಾಟ ಹೆಚ್ಚುತ್ತಿದೆ. ಯಾವುದೇ ವಿಷಯವಾಗಿರಲಿ, ಅದಕ್ಕೆ ಧರ್ಮ, ಜಾತಿ, ರಾಜಕೀಯದ ಬಣ್ಣ ಅಂಟಿಸಿ ವಿಷಯಾಂತರಗೊಳಿಸಿ ಲಾಭಕ್ಕೆ ಬಳಸುವವರ ಸಂಖ್ಯೆಯೇ ಹೆಚ್ಚು.

ಯಾವುದೇ ವಿಷಯ, ಹೇಳಿಕೆ ಅಥವಾ ವರದಿಗಳನ್ನು ಕೂಲಂಕಷವಾಗಿ ಪರಿಶೀಲನೆಗೆ, ವಿಮರ್ಶೆಗೆ ಒಳಪಡಿಸುವ ವ್ಯವಧಾನ ಜನರಲ್ಲಿ ಕಡಿಮೆಯಾಗುತ್ತಿದೆ. ವಿವೇಕಾನಂದರ ವಿವೇಕವಾಣಿ, ಪಂಪನ ‘ಮನುಷ್ಯ ಜಾತಿ ತಾನೊಂದೆ ವಲಂ’, ಕುವೆಂಪು ಅವರ ‘ವಿಶ್ವಮಾನವ ಸಂದೇಶ’ ಎಲ್ಲರ ಮನೆ– ಮನ ತಲುಪಬೇಕಾಗಿದೆ.

- ಗಣೇಶ ಆರ್., ಮಂಗಳೂರು

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.