ಮಂಗಳವಾರ, ಅಕ್ಟೋಬರ್ 27, 2020
27 °C

ಸತ್ಯಾಸತ್ಯತೆ ಎತ್ತಿ ಹಿಡಿಯಲಿ

ವಾಚಕರ ವಾಣಿ Updated:

ಅಕ್ಷರ ಗಾತ್ರ : | |

ಸುದ್ದಿವಾಹಿನಿಗಳ ವಾರದ ರೇಟಿಂಗ್ (ಟಿಆರ್‌ಪಿ) ಅನ್ನು ಮೂರು ತಿಂಗಳ ಕಾಲ ಸ್ಥಗಿತಗೊಳಿಸಿದ ಬ್ರಾಡ್‌ಕಾಸ್ಟ್ ಆಡಿಯನ್ಸ್ ರಿಸರ್ಚ್ ಕೌನ್ಸಿಲ್‌ನ (ಬಾರ್ಕ್) ನಿರ್ಧಾರ ಸರಿಯಾಗಿದೆ. ಕೆಲವು ತಿಂಗಳುಗಳ ಹಿಂದೆಯೇ ಈ ನಿರ್ಧಾರಕ್ಕೆ ಬಂದಿದ್ದರೆ ಇನ್ನೂ ಚೆನ್ನಾಗಿರುತ್ತಿತ್ತು ಎನಿಸುತ್ತದೆ. ದೇಶದಲ್ಲಿ ಕೊರೊನಾ ಪ್ರಾರಂಭವಾದ ಕಾಲದಿಂದ ಕೆಲವು ಮಾಧ್ಯಮಗಳ ವರ್ತನೆಯಂತೂ ತಾರಕಕ್ಕೇರಿತ್ತು. ಪ್ರಮುಖರ ಸಾವು, ನೋವಿನ ಪ್ರಕರಣಗಳನ್ನು ಅವು ‘ನಮ್ಮಲ್ಲೇ ಮೊದಲು’ ಎಂದು ಪೈಪೋಟಿಯಿಂದ ಬಿಂಬಿಸಿಕೊಂಡವು. ಸರ್ಕಾರ ಕೆಲವು ನಿರ್ಧಾರಗಳನ್ನು ಬದಲಾಯಿಸಿದಾಗಲೂ ‘ಅದೆಲ್ಲ ನಾವು ಕಾರ್ಯಕ್ರಮ ಪ್ರಸಾರ ಮಾಡಿ ಒತ್ತಡ ಹಾಕಿದ್ದರಿಂದಲೇ ಆಗಿದ್ದು’ ಎಂದು ಬಿತ್ತರಿಸಿಕೊಂಡವು. ಅದರಲ್ಲೂ ಪ್ರಣವ್ ಮುಖರ್ಜಿ, ಎಸ್.ಪಿ.ಬಾಲಸುಬ್ರಹ್ಮಣ್ಯಂ ಅವರು ಬದುಕಿದ್ದಾಗಲೇ ಅವರ ನಿಧನದ ಸುದ್ದಿ ಹರಿದಾಡಿದ್ದು, ಎಸ್‌ಪಿಬಿ ಅವರೇ ‘ಮಾಧ್ಯಮದ‌ ಇಂತಹ ಪ್ರಸಾರ ತೀವ್ರ ನೋವುಂಟು ಮಾಡಿದೆ’ ಎಂದು ಒಂದು ವಿಡಿಯೊ ಮೂಲಕ ಬೇಸರ ವ್ಯಕ್ತಪಡಿಸಿದ್ದು ಅಧ್ವಾನದ ಪರಮಾವಧಿ.

ಕೆಲವು ಟಿ.ವಿ ಚಾನೆಲ್‌ಗಳು ಕೆಲವೊಮ್ಮೆ ಸತ್ಯಾಸತ್ಯತೆಯನ್ನು ಅರಿಯದೆ ಟಿಆರ್‌ಪಿಗೋಸ್ಕರ‌‌ ಆತುರದಲ್ಲಿ ಸುದ್ದಿಗಳನ್ನು ಪ್ರಸಾರ ಮಾಡುವುದು ವ್ಯಕ್ತಿಯ ತೇಜೋವಧೆಗೆ, ಕೌಟುಂಬಿಕ ಮನಸ್ತಾಪಕ್ಕೆ ಕಾರಣವಾಗುತ್ತದೆ. ಸಂವಿಧಾನದ ನಾಲ್ಕನೇ ಅಂಗ ಎಂದು ಬಿಂಬಿಸಿಕೊಳ್ಳುವ ಮಾಧ್ಯಮಗಳು ಸತ್ಯಾಸತ್ಯತೆಯನ್ನು ಎತ್ತಿ ಹಿಡಿಯುವ ಕೆಲಸ ಮಾಡಬೇಕು. ಅದುಬಿಟ್ಟು ದಿಕ್ಕು ತಪ್ಪಿಸುವ, ಅನುಮಾನ ಮೂಡಿಸುವ ಕೆಲಸ ಅವುಗಳಿಗೆ ಶೋಭೆ ತರುವುದಿಲ್ಲ.

- ಚೆಲುವರಾಜು ಕೆ., ಧನಗೆರೆ, ಕೊಳ್ಳೇಗಾಲ

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.