ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಾಚಕರ ವಾಣಿ: ‘ಆತ್ಮಶ್ರೀ’ಯ ಜಾಗೃತಿಗೆ ಎಷ್ಟು ಕಾಲ ಬೇಕು?

Last Updated 29 ನವೆಂಬರ್ 2020, 18:34 IST
ಅಕ್ಷರ ಗಾತ್ರ

ಕುವೆಂಪು ಅವರನ್ನು ಸಂದರ್ಶನವೊಂದರಲ್ಲಿ, ‘ವಿಶ್ವಮಾನವ ತತ್ವವನ್ನು ಎಲ್ಲರೂ ಅನುಸರಿಸುವಕಾಲ ಯಾವಾಗ ಬರುತ್ತದೆ?’ ಎಂದು ಕೇಳಲಾಗಿತ್ತು. ಈ ಪ್ರಶ್ನೆಗೆ ಅವರು ನೀಡಿದ ಉತ್ತರ ದಿಗ್ಭ್ರಮೆ ಮೂಡಿಸುತ್ತದೆ. ಅದೇನೆಂದರೆ, ಜಾತಿಮುಕ್ತ, ಮೌಢ್ಯಮುಕ್ತ ಸಮಾಜ ಬರಲು ಕನಿಷ್ಠ
ಐನೂರು ವರ್ಷ ಬೇಕಾಗುತ್ತದೆ ಎಂದಿದ್ದರು ಅವರು.

ಆದರೆ ಕರ್ನಾಟಕದಲ್ಲಿ ಇತ್ತೀಚೆಗೆ ತಮ್ಮ ತಮ್ಮ ಜಾತಿ ಅಭಿವೃದ್ಧಿಗಾಗಿ ಮಂಡಳಿಗಳನ್ನು ರಚಿಸಿ ಎಂದು ಬೇಡಿಕೆ ಇಡುತ್ತಿರುವ, ತಮ್ಮ ಜಾತಿಗಳನ್ನು ಪರಿಶಿಷ್ಟ ಪಟ್ಟಿಗೆ ಸೇರಿಸಬೇಕೆಂದು ಒತ್ತಾಯಪಡಿಸುತ್ತಿರುವ,ಜಾತಿಗೊಂದು ಮಠ, ಮಠಕ್ಕೊಬ್ಬ ಸ್ವಾಮೀಜಿ, ಪ್ರತಿವರ್ಷ ಮಠಕ್ಕಿಷ್ಟು ಅನುದಾನ ಬೇಕೇಬೇಕೆಂದು ಆಗ್ರಹಿಸಿ ನಡೆಯುತ್ತಿರುವ ಹೋರಾಟಗಳನ್ನು (ಸ್ವತಃ ಸ್ವಾಮೀಜಿಗಳೇ ಬೀದಿಗಿಳಿದು!) ನೋಡಿದರೆ, ಕುವೆಂಪು ಅವರು ಅಂದುಕೊಂಡಂತೆ ‘ಆತ್ಮಶ್ರೀ’ಯ ಜಾಗೃತಿಗೆ ಐನೂರು ವರ್ಷವಲ್ಲ, ಐದು ಸಾವಿರ ವರ್ಷಗಳಾದರೂ ಸಾಧ್ಯವಿಲ್ಲವೇನೋ ಅನಿಸುತ್ತಿದೆ.

-ಜೆ.ಬಿ.ಮಂಜುನಾಥ, ಪಾಂಡವಪುರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT