ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾತಿನ ಒಳಾರ್ಥ ಗ್ರಹಿಸಿ

ಅಕ್ಷರ ಗಾತ್ರ

ಆತ್ಮಹತ್ಯೆ ಮಾಡಿಕೊಳ್ಳುವ ರೈತ ಹೇಡಿ ಎಂಬ ಕೃಷಿ ಸಚಿವ ಬಿ.ಸಿ.ಪಾಟೀಲ ಅವರ ಹೇಳಿಕೆ ಅನಗತ್ಯ ವಿವಾದ ಸೃಷ್ಟಿಸಿದೆ. ಸಿದ್ದರಾಮಯ್ಯ ನೇತೃತ್ವದ ಸರ್ಕಾರದಲ್ಲಿ ವಸತಿ ಸಚಿವರಾಗಿದ್ದ ಚಿತ್ರನಟ ಅಂಬರೀಷ್, ರೈತರ ಆತ್ಮಹತ್ಯೆಗೆ ಪರಿಹಾರ ನೀಡುವುದು ಸಮಸ್ಯೆಯನ್ನು ನಿರ್ಮೂಲ ಮಾಡಿದಂತೆ ಅಲ್ಲ, ಮತ್ತಷ್ಟು ಆತ್ಮಹತ್ಯೆಗೆ ಉತ್ತೇಜನ ಕೊಟ್ಟಂತೆ ಎಂದಿದ್ದರು. ಈಗ ಪಾಟೀಲರ ಹೇಳಿಕೆಯಲ್ಲೂ ಅದೇ ಭಾವವಿದ್ದು, ಅವರ ಮಾತಿನ ಒಳಾರ್ಥವನ್ನು ಗ್ರಹಿಸದೆ ಕೇವಲ ಯಥಾರ್ಥವನ್ನು ಕುರಿತಷ್ಟೇ ಚರ್ಚಿಸಲಾಗುತ್ತಿದೆ.

ರೈತ ದೇಶದ ಬೆನ್ನೆಲುಬು, ಅವನ ಸಮಸ್ಯೆಗಳಿಗೆ ಪರಿಹಾರ ಒದಗಿಸುವ ನಿಟ್ಟಿನಲ್ಲಿ ಕಾರ್ಯಪ್ರವೃತ್ತವಾಗದಿರುವ ಹೊಣೆಗೇಡಿತನ ಎಲ್ಲ ಪಕ್ಷಗಳಲ್ಲೂ ಕಂಡುಬರುವ ಸಾಮಾನ್ಯ ಲೋಪ. ವ್ಯವಸ್ಥೆಯೊಂದು ಈ ಕುರಿತು ಮೌನವಾಗಿದೆ ಎಂದರೆ ಅದು ಬಲಹೀನತೆ ಅಲ್ಲ, ಮುಂದೊದಗಬಹುದಾದ ಭೀಕರ ಪ್ರತಿರೋಧಕ್ಕೆ ಸರ್ಕಾರವೇ ಜನರಿಗೆ ನೀಡುವ ಹ್ವಾನವಾಗಬಹುದು.

- ಆರ್.ವೆಂಕಟರಾಜು,ಬೆಂಗಳೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT