ಬುಧವಾರ, ಆಗಸ್ಟ್ 10, 2022
23 °C

ಸ್ವಯಂ ‘ಬಂಧನ’ ಅಗತ್ಯವೇ?

ವಾಚಕರ ವಾಣಿ Updated:

ಅಕ್ಷರ ಗಾತ್ರ : | |

ಯಾವುದೇ ಮದುವೆ, ಶಾಲಾ ಕಾಲೇಜಿನ ಸಮಾರಂಭ ಅಥವಾ ಧಾರ್ಮಿಕ ಕಾರ್ಯಕ್ರಮಗಳನ್ನು ಗಮನಿಸಿದರೆ, ಹುಡುಗರು ಸ್ಪೋರ್ಟ್ಸ್‌ ಶೂಸ್ ಹಾಕಿಕೊಂಡು ಭರ್‍ರನೆ ಅತ್ತಿಂದಿತ್ತ ಓಡಾಡುತ್ತಿದ್ದರೆ, ಹುಡುಗಿಯರು ಹೈ ಹೀಲ್ಡ್‌ ಚಪ್ಪಲಿ ಹಾಕಿಕೊಂಡು ಕುಂಟುತ್ತಾ ನಡೆದಾಡುತ್ತಿರುತ್ತಾರೆ. ಕೆಲವೊಮ್ಮೆ ಮುಗ್ಗರಿಸಿ ಬೀಳುವುದೂ ಉಂಟು. ಗಂಡಸರು ಪ್ಯಾಂಟ್, ಶರ್ಟ್ ಧರಿಸಿ ಆರಾಮವಾಗಿ ಇರುತ್ತಾರೆ. ಹೆಣ್ಣುಮಕ್ಕಳು ಮಾತ್ರ ತಮ್ಮ ಸ್ವತಂತ್ರ ಚಲನೆಗೆ ಅಡ್ಡಿಯಾಗುವ, ದೈಹಿಕ ಹಿಂಸೆ ನೀಡುವ ದುಬಾರಿ ಸೀರೆ, ಬಳೆಯಂತಹ ವಸ್ತುಗಳಿಂದ ಬಂಧಿಸಿಕೊಂಡಿರುತ್ತಾರೆ. ಕೆಲವೊಮ್ಮೆ ಇವು ಅಪಾಯಕಾರಿಯೂ ಆಗುತ್ತವೆ.

ಸುಖವಾಗಿ ತಿನ್ನಲು, ಕುಡಿಯಲು ಲಿಪ್‌ಸ್ಟಿಕ್, ಮೇಕಪ್ ಅಡ್ಡಿಯಾಗುತ್ತವೆ. ಇಂತಹ ಸಮಸ್ಯೆಗಳು ಎಲ್ಲಾ ದೇಶ ಮತ್ತು ಎಲ್ಲಾ ಧರ್ಮದ ಹೆಣ್ಣು ಮಕ್ಕಳಲ್ಲಿ ಬೇರೆ ಬೇರೆ ರೀತಿಯಲ್ಲಿ ಇರುತ್ತವೆ. ಕೆಲವು ವಿಷಯಗಳಿಗೆ ಧಾರ್ಮಿಕ ಕಟ್ಟಲೆಗಳಿರಬಹುದು. ಆದರೆ ಕನಿಷ್ಠ ಲಿಪ್‌ಸ್ಟಿಕ್, ನೇಲ್ ಪಾಲಿಶ್, ಹೈ ಹೀಲ್ಡ್‌ ಹಿಂಸೆಯಿಂದಲಾದರೂ ಬಿಡುಗಡೆ ಹೊಂದಬಾರದೇ? ಇದಕ್ಕೆ ಸ್ತ್ರೀಯರೇ ಮನಸ್ಸು ಮಾಡಬೇಕು.

- ಪ್ರೊ. ಶಶಿಧರ್‌ ಪಾಟೀಲ್‌, ಬಾಗಲಕೋಟೆ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು