ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರೇಮಿಗಳ ದಿನ: ಬೇಕು ಹೊಸ ರೂಪ

Last Updated 14 ಫೆಬ್ರುವರಿ 2021, 19:43 IST
ಅಕ್ಷರ ಗಾತ್ರ

ಫೆಬ್ರುವರಿ 14 ಬಂತೆಂದರೆ ಪ್ರೇಮಿಗಳ ದಿನದ ಪರ, ವಿರೋಧಗಳ ವಾದ-ವಿವಾದ ಪ್ರಾರಂಭವಾಗುವುದು ಮಾಮೂಲು ಎಂಬಂತಾಗಿದೆ. ಆದರೆ ಈ ಮಧ್ಯೆ ಪ್ರೇಮಿಗಳ ಸಂಭ್ರಮಾಚರಣೆ ಮಾತ್ರ ನಿಂತಿಲ್ಲ.

ಕೆಲವು ವಿರೋಧಿಗಳ ಭಯದಿಂದ ಪಾರ್ಕುಗಳಲ್ಲಿ ಪ್ರೇಮಿಗಳ ಸಂಖ್ಯೆ ಸ್ವಲ್ಪ ಮಟ್ಟಿಗೆ ಕಡಿಮೆಯಾಗಿದೆ ಎನಿಸಿದರೂ ಗಿಫ್ಟ್ ಸೆಂಟರ್‌ಗಳು, ಮಾಲ್‌ಗಳು, ಐಸ್‌ಕ್ರೀಮ್ ಪಾರ್ಲರ್‌ಗಳು ಹಾಗೂ ಕೆಫೆಗಳು ಅಂದು ಪ್ರೇಮಿಗಳಿಂದಲೇ ತುಂಬಿರುತ್ತವೆ. ಪ್ರೇಮ ನಿವೇದನೆಯ ರೋಮಾಂಚಕಾರಿ ಕ್ಷಣಗಳಿಗಾಗಿ ವರ್ಷವಿಡೀ ಕಾಯುವ ಪ್ರೇಮಿಗಳು, ಪರ-ವಿರೋಧಿಗಳ ಭಾಷಣಗಳಿಗೆ ಕಿವಿಗೊಡುವಷ್ಟು ತಾಳ್ಮೆ ಹೊಂದಿರುವುದಿಲ್ಲ.

ಇವೆಲ್ಲವುಗಳ ನಡುವೆಯೂ ಪ್ರೇಮಿಗಳ ದಿನವನ್ನು ಅರ್ಥಪೂರ್ಣವಾಗಿಸುವ ನಿಟ್ಟಿನಲ್ಲಿ ಒಂದು ಹೊಸ ದೃಷ್ಟಿಕೋನದ ಅಗತ್ಯವಿದೆಯೇನೊ ಎನ್ನಿಸುತ್ತದೆ. ಎಲ್ಲವನ್ನೂ ಫ್ಯಾಶನ್ ರೀತಿಯಲ್ಲಿ ನೋಡುವ ಯುವಜನಾಂಗ, ಪ್ರೇಮವನ್ನೂ ಅದೇ ರೀತಿ ಪರಿಗಣಿಸುತ್ತಿದೆ. ಕೇವಲ ದೇಹಾಕರ್ಷಣೆ ಅಥವಾ ಫ್ಯಾಶನ್ನಿನ ಬದಲಾಗಿ ನಿಜವಾದ ಪ್ರೇಮವನ್ನು ಹುಡುಕುವಂತೆ ಆಗಬೇಕಾಗಿದೆ. ಧರ್ಮವಾದಿಗಳೂ ಅದನ್ನು ವಿರೋಧಿಸುತ್ತಲೇ ಹೋಗುವ ಬದಲು, ಅದಕ್ಕೊಂದು ಹೊಸ ರೂಪ ನೀಡುವಂತೆ ಆಗಬೇಕು. ಆಗಲೇ ಪ್ರೇಮಿಗಳ ದಿನ ಸಾರ್ಥಕ್ಯ ಪಡೆದೀತು.

-ರಾಜಶೇಖರ ಬ. ಕೋಟಿ, ಕಿತ್ತೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT