ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಖಾಸಗಿ ಬಾವಿಗಳೂ ಸ್ವಚ್ಛಗೊಳ್ಳಲಿ

ಅಕ್ಷರ ಗಾತ್ರ

ಜಲ ಸಂರಕ್ಷಣೆ ಕುರಿತು ಜನಜಾಗೃತಿ ಮೂಡಿಸಲು ಕೇಂದ್ರ ಜಲಶಕ್ತಿ ಸಚಿವಾಲಯ ‘ಕ್ಯಾಚ್ ದಿ ರೈನ್’ ಅಭಿಯಾನ ಆರಂಭಿಸುತ್ತಿದೆ. ಬಿದ್ದ ಜಾಗದಲ್ಲಿ, ಬಿದ್ದ ಸಮಯದಲ್ಲೇ ಮಳೆ ನೀರನ್ನು ಸಂಗ್ರಹಿಸಬೇಕು ಎಂಬುದು ಅಭಿಯಾನದಉದ್ದೇಶ (ಪ್ರ.ವಾ., ಮಾರ್ಚ್‌ 1). ಮುಖ್ಯವಾಗಿ ಕೆರೆ, ಕೃಷಿ ಹೊಂಡಗಳ ಹೂಳು ತೆಗೆಸುವ ಕಾರ್ಯ ಸರ್ಕಾರದ ನೇತೃತ್ವದಲ್ಲೇ ಆಗುವುದು. ಆದರೆ ಎಷ್ಟೋ ಮನೆಗಳ ಬಾವಿಗಳಲ್ಲಿ ಹೂಳು ತುಂಬಿಕೊಂಡಿದೆ. ಸ್ವಚ್ಛಗೊಳಿಸದ ಕಾರಣ ನೀರು ಬಳಕೆಗೆ ಯೋಗ್ಯವಾಗಿಲ್ಲ. ಪರಿಣತಿಯ ಕೊರತೆ ಅಥವಾ ಆರ್ಥಿಕವಾಗಿ ಸಬಲರಾಗಿಲ್ಲದೇ ಇರುವುದು ಇದಕ್ಕೆ ಕಾರಣ. ಸರ್ಕಾರದ ನೇತೃತ್ವದಲ್ಲಿ ಸ್ಥಳೀಯ ಸಂಸ್ಥೆಗಳು ಈ ದಿಸೆಯಲ್ಲಿ ಖಾಸಗಿ ಬಾವಿಗಳನ್ನು ಸ್ವಚ್ಛಗೊಳಿಸಿ ಜಲದ ಕಣ್ಣು ತೆರೆಸಿದಲ್ಲಿ ಜಲ ಸಂರಕ್ಷಣೆ ಆಗುತ್ತದೆ. ಇದರಿಂದ ಸ್ಥಳೀಯ ಸಂಸ್ಥೆಗಳ ಮೇಲೆ ನೀರಿನ ಅವಲಂಬನೆ ಕಡಿಮೆಯಾಗುತ್ತದೆ.

- ನಗರ ಗುರುದೇವ್ ಭಂಡಾರ್ಕರ್,ಹೊಸನಗರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT