ಪತ್ರಕರ್ತರಾದ ಫಿಲಿಪ್ಪೀನ್ಸ್‌ನ ಮರಿಯಾ ರೆಸ್ಸಾ ಮತ್ತು ರಷ್ಯಾದ ಡಿಮಿಟ್ರಿ ಮುರಾಟೋವ್ ಅವರಿಗೆ 2021ನೇ ಸಾಲಿನ ನೊಬೆಲ್ ಶಾಂತಿ ಪ್ರಶಸ್ತಿ ಘೋಷಣೆಯಾದ ಸುದ್ದಿಯನ್ನು (ಪ್ರ.ವಾ., ಅ. 9) ಓದಿ ಸಂತಸವಾಯಿತು. ಈ ಪ್ರಶಸ್ತಿಯ ಆಯ್ಕೆ ಸಮಿತಿ ಅಧ್ಯಕ್ಷರಾದ ಬೆರಿಟ್ ರೀಸ್ ಆ್ಯಂಡರ್ಸನ್ ಅವರು ಪ್ರಶಸ್ತಿ ಘೋಷಣೆ ಸಂದರ್ಭದಲ್ಲಿ ನಡೆಸಿದ ಸುದ್ದಿಗೋಷ್ಠಿಯಲ್ಲಿ ಹೇಳಿದ ಮಾತುಗಳು ಹೀಗಿವೆ: ‘ವಿಶ್ವದೆಲ್ಲೆಡೆ ಪ್ರಜಾಪ್ರಭುತ್ವ ಮತ್ತು ಪತ್ರಿಕಾ ಸ್ವಾತಂತ್ರ್ಯ ಪ್ರತಿಕೂಲ ಪರಿಸ್ಥಿತಿಯನ್ನು ಎದುರಿಸುತ್ತಿವೆ. ಅದರ ರಕ್ಷಣೆಗಾಗಿ ನಿಲ್ಲುವ ಎಲ್ಲ ಪತ್ರಕರ್ತರನ್ನೂ ಈ ಇಬ್ಬರು ಪ್ರಶಸ್ತಿ ಪುರಸ್ಕೃತರು ಪ್ರತಿನಿಧಿಸುತ್ತಾರೆ’. ಈ ಮಾತು ವಿಶ್ವದಾದ್ಯಂತ ಇರುವ ಪತ್ರಕರ್ತರಿಗೆ ಸಂದ ಅತಿ ದೊಡ್ಡ ಗೌರವದ ಮಾತಾಗಿದೆ.
ಇಂಥ ಮಾತುಗಳ ಮೂಲಕ ಇಡೀ ವಿಶ್ವದ ಪತ್ರಕರ್ತರೆಲ್ಲ ಒಂದೇ ಕುಟುಂಬದವರು ಎಂದು ತಿಳಿಸುವ ಆ್ಯಂಡರ್ಸನ್ ಅವರ ದೃಷ್ಟಿಕೋನ ಪ್ರಶಂಸಾರ್ಹವಾದದ್ದು. ಮರಿಯಾ ಮತ್ತು ಡಿಮಿಟ್ರಿ ಸೇರಿದಂತೆ ಪ್ರಜಾಪ್ರಭುತ್ವ ಹಾಗೂ ಪತ್ರಿಕಾ ಸ್ವಾತಂತ್ರ್ಯದ ರಕ್ಷಣೆಗಾಗಿ ನಿಲ್ಲುವ ವಿಶ್ವದ ಎಲ್ಲ ಪತ್ರಕರ್ತರೂ ಅಭಿನಂದನಾರ್ಹರು.
- ಎಲ್.ಎಸ್.ಶಿವಮೂರ್ತಿ,ಬೆಂಗಳೂರು
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.