ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಮಾನವಾದ ನ್ಯಾಯ ದೊರಕಲಿ

ಅಕ್ಷರ ಗಾತ್ರ

ಕೊರೊನಾ ಕಾಲಘಟ್ಟದಲ್ಲಿ ಹತ್ತನೇ ತರಗತಿ ಪರೀಕ್ಷೆಗೆ ಹಾಜರಾದ ಎಲ್ಲ ವಿದ್ಯಾರ್ಥಿಗಳನ್ನೂ ಸರ್ಕಾರ ಪಾಸು ಮಾಡಿತು. ಆದರೆ ಸಾವಿರಾರು ವಿದ್ಯಾರ್ಥಿಗಳು ಮುಖ್ಯ ಪರೀಕ್ಷೆಗೆ ಹಾಜರಾಗಲಿಲ್ಲ. ಕಾರಣಗಳು ಹತ್ತಾರು. ಗ್ರಾಮಗಳಿಗೆ ಹೋದವರು ಪರೀಕ್ಷೆ ಕಟ್ಟಲು ಸಾಧ್ಯವಾಗದೇ ಇರಬಹುದು, ಶುಲ್ಕ ಕಟ್ಟದಿದ್ದಕ್ಕೆ ಸಂಸ್ಥೆಯವರು ಪ್ರವೇಶಪತ್ರ ನೀಡದೇ ಹೋಗಿರಬಹುದು ಇಲ್ಲವೇ ಪರೀಕ್ಷಾ ಶುಲ್ಕ ಕಟ್ಟಲಾಗದಷ್ಟು ಆರ್ಥಿಕವಾಗಿ ಹಿಂದುಳಿದಿರಬಹುದು, ಈ ಬಾರಿ ಪರೀಕ್ಷೆ ಶುಲ್ಕ ಕಟ್ಟದೇ ಇದ್ದರೂ ಎಲ್ಲರನ್ನೂ ಪಾಸು ಮಾಡಬಹುದು ಎಂದುಕೊಂಡಿರಬಹುದು ಅಥವಾ ಇರುವ ಒಬ್ಬ ಮಗ ಇಲ್ಲವೇ ಮಗಳು ಈ ವರ್ಷ ಪರೀಕ್ಷೆಗೆ ಹಾಜರಾಗದಿದ್ದರೆ ಏನಂತೆ, ಬದುಕಿ ಉಳಿದರೆ ಸಾಕು ಎಂಬುದು ಪೋಷಕರ ನಿಲುವೂ ಆಗಿದ್ದಿರಬಹುದು.

ಬಳಿಕ ಪೂರಕ ಪರೀಕ್ಷೆಗೆ ಹಾಜರಾಗಿದ್ದವರಲ್ಲಿ ಬಹಳಷ್ಟು ಮಂದಿ ಅನುತ್ತೀರ್ಣರಾಗಿದ್ದಾರೆ. ಇದರಿಂದ, ಮುಖ್ಯ ಪರೀಕ್ಷೆಗೆ ಹಾಜರಾಗಿದ್ದ ತಮ್ಮ ಸ್ನೇಹಿತರಂತೆ ತಾವೂ ಉತ್ತೀರ್ಣರಾಗಬಹುದು ಎಂಬ ಭರವಸೆ ಹೊಂದಿದ್ದವಿದ್ಯಾರ್ಥಿಗಳಿಗೆ ದೊಡ್ಡ ಆಘಾತವಾಗಿದೆ. ಪಿಯುಸಿಗೆ ಹೋಗಲೇಬೇಕೆಂದು ನಿರೀಕ್ಷಿಸಿದ್ದವರು ನಿರಾಸೆಗೊಂಡಿದ್ದಾರೆ. ಎಲ್ಲ ವಿದ್ಯಾರ್ಥಿಗಳನ್ನೂ ಒಂದೇ ಎಂಬಂತೆ ನೋಡಿ, ಅವರಿಗೂ ಸಮಾನವಾದ ನ್ಯಾಯ ದೊರಕಿಸಿಕೊಡಬಲ್ಲದೇ ಸರ್ಕಾರ?

- ಡಾ. ಮಲ್ಲತ್ತಹಳ್ಳಿ ಎಚ್. ತುಕಾರಾಂ,ಬೆಂಗಳೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT