ಸೋಮವಾರ, ಆಗಸ್ಟ್ 10, 2020
23 °C

ವಾಚಕರ ವಾಣಿ | ಮತ್ತೆ ಬೀದಿಗೆ ಬಿದ್ದಿದ್ದಾರೆ ಭಿಕ್ಷುಕರು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕೊರೊನಾದಿಂದ ಲಾಕ್‌ಡೌನ್‌ ಘೋಷಣೆಯಾಗಿ ಊರಿಗೆ ಊರೇ ಸ್ತಬ್ಧವಾದಾಗ, ಭಿಕ್ಷುಕರ ಸ್ಥಿತಿ ಅತ್ಯಂತ ಶೋಚನೀಯವಾಗಿತ್ತು. ಆದರೆ ರಾಜ್ಯ ಸರ್ಕಾರವು ತಾಲ್ಲೂಕು ಮಟ್ಟದಲ್ಲಿ ಕಾರ್ಮಿಕರು ಮತ್ತು ನಿರಾಶ್ರಿತರಿಗಾಗಿ ಸ್ಥಳೀಯ ಆಡಳಿತದ ಮೂಲಕ ಮದುವೆ ಮಂಟಪ, ಹಾಸ್ಟೆಲ್‌ ಮುಂತಾದೆಡೆ ನಿರಾಶ್ರಿತರ ಕೇಂದ್ರಗಳನ್ನು ತೆರೆಯಿತು. ಸುಮಾರು ಎರಡು ತಿಂಗಳು ಅವರಿಗೆ ದಿನದ ಮೂರೂ ಹೊತ್ತು ಹೊಟ್ಟೆ ತುಂಬುವಷ್ಟು ಬಿಸಿಯೂಟವನ್ನು ಕೊಟ್ಟು ಸಲಹಿತು. ಇದನ್ನು ಒಬ್ಬ ಕೊರೊನಾ ಸೈನಿಕನಾಗಿ ಅರಸೀಕೆರೆಯ ನಿರಾಶ್ರಿತರ ಕೇಂದ್ರದಲ್ಲಿ ಕಣ್ಣಾರೆ ಕಂಡಿದ್ದಲ್ಲದೆ, ಅವರಿಗೆಲ್ಲ ಕೈಯಾರೆ ಅಡುಗೆಯನ್ನು ಬಡಿಸಿ ಅವರು ಹೊಟ್ಟೆ ತುಂಬಿಕೊಳ್ಳುವುದನ್ನು ನೋಡಿ ಆನಂದಿಸಿದ್ದೇನೆ.

ನಿರ್ಗತಿಕರು, ಭಿಕ್ಷುಕರು, ಕೈಲಾಗದವರೆಲ್ಲ ಕೇಂದ್ರದ ಒಂದೇ ಕುಟುಂಬದ ಸದಸ್ಯರಂತೆ ಕೂಡಿ ಬಾಳಿದ್ದು
ವರ್ಣಿಸಲಸದಳ. ಆದರೆ ಲಾಕ್‌ಡೌನ್‌ ತೆರವಾದ ನಂತರ ಆ ವ್ಯವಸ್ಥೆ ಸ್ಥಗಿತವಾಗಿ, ಭಿಕ್ಷುಕರೆಲ್ಲ ಪುನಃ ಬೀದಿಗೆ ಬಿದ್ದಿದ್ದಾರೆ. ತಾಲ್ಲೂಕುಗಳಲ್ಲಿ ಇಂತಹ ನಿರಾಶ್ರಿತರ ಶಿಬಿರಗಳನ್ನು ಶಾಶ್ವತವಾಗಿ ತೆರೆಯುವ ಅಗತ್ಯವಿಲ್ಲದಿದ್ದರೂ ಕೊರೊನಾ ಸಂಕಷ್ಟದ ಈ ಸಮಯದಲ್ಲಿ, ಯಾವುದಾದರೂ ಒಂದು ಸ್ಥಳವನ್ನು ಗುರುತಿಸಿ ಭಿಕ್ಷುಕರು, ಕೈಲಾಗದವರಿಗೆ ದಿನಕ್ಕೆ ಕನಿಷ್ಠ ಎರಡು ಬಾರಿಯಾದರೂ ಅನ್ನ, ಸಾರನ್ನಾದರೂ ನೀಡಬೇಕು. ಹೀಗೆ ಮೊದಲು ಇಂತಹವರ ಹಸಿವು ನೀಗಿಸಿ, ಬಳಿಕ ಅವರ ಜೀವನ, ವೃತ್ತಿ, ಆರೋಗ್ಯದ ಕಡೆ ಗಮನ ಹರಿಸಬಹುದು.

-ಸರ್ದಾರ್ ಎಂ. ತನಾಝ್, ಅರಸೀಕೆರೆ

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು