ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕನಕದಾಸ ಜಯಂತಿ ರದ್ದು ಮಾಡುವಂತೆ ಆಗ್ರಹಿಸಿರುವುದು ಕುರುಬ ಸಮಾಜದ ದೃಢ ನಿರ್ಧಾರ

Last Updated 10 ನವೆಂಬರ್ 2019, 19:35 IST
ಅಕ್ಷರ ಗಾತ್ರ

ಕನಕದಾಸ ಜಯಂತಿ ರದ್ದು ಮಾಡುವಂತೆ ಕುರುಬ ಸಮಾಜ ಆಗ್ರಹಿಸಿರುವುದು (ಪ್ರ.ವಾ., ನ. 9) ಆ ಸಮಾಜದ ದೃಢ ನಿರ್ಧಾರ.

ಬಸವ, ಕನಕ, ವಾಲ್ಮೀಕಿ, ಬುದ್ಧ, ಅಂಬೇಡ್ಕರ್, ಏಸು ಮುಂತಾದವರೆಲ್ಲಾ ಒಂದಲ್ಲಾ ಒಂದು ವಿಧದಲ್ಲಿ ಶ್ರೇಷ್ಠರು. ಇವರೆಲ್ಲರ ಚಿಂತನೆಗಳು ಪ್ರತಿಯೊಬ್ಬರಿಗೂ ಮಾದರಿ. ಇವರ ಜಯಂತಿಗಳನ್ನು ಜಾತಿ ಆಧಾರದ ಮೇಲೆ ಕಾಣುತ್ತಿರುವುದು ನಮ್ಮ ದೊಡ್ಡ ತಪ್ಪು. ರಾಜಕಾರಣಿಗಳು ಇದನ್ನು ತಮ್ಮ ಬೇಳೆ ಬೇಯಿಸಿಕೊಳ್ಳಲು ಬಳಸಿಕೊಳ್ಳುತ್ತಿದ್ದಾರೆ.

ಈ ಜಯಂತಿಗಳನ್ನು ಆಚರಿಸಲು ಆ ಮಹಾನ್ ವ್ಯಕ್ತಿಗಳ ಹೆಸರಿನಲ್ಲಿ ರಜೆ ಘೋಷಣೆ ಮಾಡುವುದು ಸಮಂಜಸವಲ್ಲ. ಸಾಮಾನ್ಯವಾಗಿ ಆಯಾ ಸಮುದಾಯದವರಲ್ಲದೆ ಬೇರೆಯವರು ಆಚರಿಸುವುದಿಲ್ಲ. ಕುರುಬ ‌ಸ‌ಮಾಜದ ಮಾದರಿಯಲ್ಲೇ ಇತರ ಸಮುದಾಯ ದವರೂ ಜಯಂತಿಗಳ ರದ್ದತಿಗೆ ಆಗ್ರಹಿಸಿದರೆ ನಾಡಿಗೆ ಒಳಿತಾಗುತ್ತದೆ.
-ಡಾ. ಮಲ್ಲಿಕಾರ್ಜುನ ಗೋಡಬನಹಾಳ್, ಚಿತ್ರದುರ್ಗ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT