ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಾಚಕರ ವಾಣಿ: ಲಸಿಕೆ ದಾಳ ಖಂಡನಾರ್ಹ

Last Updated 23 ಅಕ್ಟೋಬರ್ 2020, 18:33 IST
ಅಕ್ಷರ ಗಾತ್ರ

ಕೊರೊನಾ ಎಂಬ ಕಗ್ಗತ್ತಲಲ್ಲಿ ಬಂದಿಯಾಗಿರುವ ಜನ ಈಗ ಲಸಿಕೆ ಎಂಬ ಬೆಳಕನ್ನು ಎದುರು ನೋಡುತ್ತಿದ್ದಾರೆ. ಇದೇ ಸಮಯದಲ್ಲಿ ಕೊರೊನಾ ಬಗೆಗಿರುವ ಜನರ ಭಯವನ್ನು ಬಂಡವಾಳ ಮಾಡಿಕೊಂಡ ವಿವಿಧ ಕ್ಷೇತ್ರಗಳ ಮಂದಿ ಪ್ರತಿನಿತ್ಯ ತಮ್ಮ ಕಾರ್ಯ ಸಾಧಿಸುತ್ತಿದ್ದಾರೆ. ಈ ಕಾರ್ಯಕ್ಕೆ ರಾಜಕೀಯ ಕ್ಷೇತ್ರವೂ ಹೊರತಾಗಿಲ್ಲ.

ಕೇಂದ್ರದಲ್ಲಿ ಅಧಿಕಾರದಲ್ಲಿರುವ ಬಿಜೆಪಿಗೆ ಇಡೀ ರಾಷ್ಟ್ರದ ಜನರ ಹಿತ ಕಾಪಾಡುವ ಹೊಣೆ ಇದೆ. ಆದರೆ, ಈ ರಾಷ್ಟ್ರೀಯ ಪಕ್ಷವು ಲಸಿಕೆಯನ್ನು ಬಿಹಾರದ ಚುನಾವಣಾ ದಾಳವಾಗಿ ಉರುಳಿಸಿರುವುದು ಖಂಡನಾರ್ಹ. ವಾಸ್ತವದಲ್ಲಿ ಆರ್ಥಿಕ ಸಂಕಷ್ಟಕ್ಕೆ ಸಿಲುಕಿರುವ ರಾಷ್ಟ್ರ ಹಾಗೂ ರಾಜ್ಯಗಳ ಬೊಕ್ಕಸದಲ್ಲಿ ಹಣವೇ ಇಲ್ಲದಂತಹ ಈ ಸಂದರ್ಭದಲ್ಲಿ ಕೇಂದ್ರ ಹಣಕಾಸು ಸಚಿವೆ ಉಚಿತ ಲಸಿಕೆ ವಿತರಿಸುವ ಭರವಸೆ ನೀಡಿದ್ದಾರೆ. ಇದನ್ನು ಗಮನಿಸಿದರೆ, ಕನಕದಾಸರ ‘ನೀ ಮಾಯೆಯೊಳಗೋ ನಿನ್ನೊಳು ಮಾಯೆಯೋ’ ಎಂಬ ಸಾಲುಗಳು ನೆನಪಾಗುತ್ತವೆ. ‌

-ಅಂಕಿತ್ ಜಿ.ಎನ್., ತೀರ್ಥಹಳ್ಳಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT