ಸೋಮವಾರ, ನವೆಂಬರ್ 18, 2019
°C

ಗಂಗೆ ಎಂದು ನಿರ್ಮಲೆಯಾದಾಳು? ಬರಹಕ್ಕೆ ಪ್ರತಿಕ್ರಿಯೆ: ನಮ‌ಗೂ ಆ ಸ್ಥಿತಿ ಬಂದರೆ?

Published:
Updated:

‘ಗಂಗೆ ಎಂದು ನಿರ್ಮಲೆಯಾದಾಳು?’ ಎಂಬ ಟಿ.ಆರ್.ಅನಂತರಾಮು ಅವರ ಲೇಖನ ಓದಿ (ಪ್ರ.ವಾ., ನ. 6) ನಮ್ಮ ರಾಜ್ಯದ ನದಿಗಳ ವಸ್ತುಸ್ಥಿತಿ ಕಣ್ಮುಂದೆ ಸುಳಿಯಿತು. ಗಂಗೆ, ಯಮುನೆಯರಿಗೆ ಬಂದಿರುವ ಸ್ಥಿತಿ ನಮ್ಮ ಕೃಷ್ಣಾ, ಕಾವೇರಿಯರಿಗೂ ಬಂದರೆ ಎಂದು ಒಂದು ಕ್ಷಣ ಹೆದರಿಕೆಯಾಯಿತು.

ದೇಶವನ್ನು ಬಯಲು ಬಹಿರ್ದೆಸೆ ಮುಕ್ತವೆಂದು ಘೋಷಿಸಿಯಾಗಿದೆ. ಆದರೆ, ನಮ್ಮಲ್ಲಿ ಹಲವರು ಸರ್ಕಾರ ನೀಡುವ ಸಹಾಯಧನದ ಆಸೆಗಾಗಿ ಮಾತ್ರ ಶೌಚಾಲಯ ಕಟ್ಟಿಸಿಕೊಂಡಿರುವುದಕ್ಕೆ ನೂರಾರು ನಿದರ್ಶನಗಳಿವೆ. ಏಕೆಂದರೆ ಗ್ರಾಮೀಣ ಭಾಗದಲ್ಲಿ ಕುಡಿಯುವ ನೀರಿಗೇ ಹಾಹಾಕಾರ ಇರುವಾಗ ಶೌಚಕ್ಕೆ ನೀರಿನ ವ್ಯವಸ್ಥೆ ಎಲ್ಲಿರುತ್ತದೆ? ಹೀಗಾಗಿ ಆ ಶೌಚಾಲಯಗಳು ಕಟ್ಟಿಗೆ, ಗೊಬ್ಬರ ಮುಂತಾದ ವಸ್ತುಗಳನ್ನಿಡುವ ಕೋಣೆಗಳಾಗಿವೆ.

ಇದನ್ನೂ ಓದಿ: ಗಂಗೆ ಎಂದು ‘ನಿರ್ಮಲೆ’ಯಾದಾಳು?

ಇನ್ನು ಪಟ್ಟಣಗಳಲ್ಲಿ ಎಲ್ಲೆಂದರಲ್ಲಿ ಕಾಣುವ ಮೋರಿಗಳು ಸೇರುವುದು ಸಹ ಜಲಮೂಲಗಳಾದ ಕೆರೆ, ಹಳ್ಳ, ನದಿಗಳ ಒಡಲನ್ನು. ಹೀಗಾಗಿ ಜಲಮೂಲಗಳ ಮಾಲಿನ್ಯ ಕೈಮೀರಿ ಹೋಗುವ ಮೊದಲೇ ಸರ್ಕಾರ ಸೂಕ್ತ ಕಾನೂನು ರಚಿಸಿ, ಜನರಲ್ಲಿ ಅರಿವು ಮೂಡಿಸಲು ಕಾರ್ಯಪ್ರವೃತ್ತವಾಗಬೇಕು.
–ವಿಶ್ವನಾಥ ರಟ್ಟಿಹಳ್ಳಿ, ಹಾವೇರಿ

ಪ್ರತಿಕ್ರಿಯಿಸಿ (+)