ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭೂಮಾಪನಾ ಇಲಾಖೆ: ಭರವಸೆಯ ಬೆಳಕು

Last Updated 21 ಜೂನ್ 2020, 15:57 IST
ಅಕ್ಷರ ಗಾತ್ರ

ಕರ್ತವ್ಯನಿಷ್ಠೆಗೆ ಹೆಸರಾಗಿರುವ ಐಎಎಸ್ ಅಧಿಕಾರಿ ಹರ್ಷ ಗುಪ್ತ ಅವರು ಭೂಮಾಪನಾ ಇಲಾಖೆಯ ಆಯುಕ್ತರಾಗಿ ನೇಮಕಗೊಂಡಿರುವುದು ಸಂತಸದ ವಿಚಾರ (ಪ್ರ.ವಾ., ಜೂನ್‌ 19). ಇದು, ಬಡ ಮತ್ತು ಮಧ್ಯಮ ವರ್ಗದ ರೈತರಿಗೆ ಆಶಾದಾಯಕ ಸಂಗತಿ. ಏಕೆಂದರೆ ಈಗ ಕೆಲವು ಭ್ರಷ್ಟ ಅಧಿಕಾರಿಗಳು ಭೂಮಾಪನ ಕಾರ್ಯದಲ್ಲಿ ಕೃಷಿಕರಿಗೆ ಸರಿಯಾಗಿ ನೆರವಾಗದೆ ಸತಾಯಿಸುತ್ತಿದ್ದಾರೆ. ಇದರಿಂದ, ನೂರಾರು ಸಮಸ್ಯೆಗಳನ್ನು ಹೊತ್ತು ಬರುವ ರೈತರು ತೊಂದರೆಗೆ ಸಿಲುಕುವಂತಾಗಿದೆ. ಹೀಗಾಗಿ, ಪ್ರತಿದಿನ ಸುಖಾಸುಮ್ಮನೆ ತಾಲ್ಲೂಕು ಕಚೇರಿಯ ಅಧಿಕಾರಿಗಳ ಬಳಿಗೆ ಅಲೆಯುವ ಕೆ.ಪಿ.ಪೂರ್ಣಚಂದ್ರ ತೇಜಸ್ವಿಯವರ ‘ತಬರನ ಕಥೆ’ಯ ತಬರನಂತಾಗಿದೆ ಜನಸಾಮಾನ್ಯರ ಪರಿಸ್ಥಿತಿ. ಹರ್ಷಗುಪ್ತ ಅವರ ಈ ನೇಮಕವು ಭರವಸೆಯ ಬೆಳಕಿನಂತೆ ನಮಗೆ ಭಾಸವಾಗುತ್ತಿದೆ.

-ಸಂಪತ್ ಬೆಟ್ಟಗೆರೆ,ಮೂಡಿಗೆರೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT