ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಾಚಕರ ವಾಣಿ: ಈ ಕೃತ್ಯ ಘೋರ ಅಪರಾಧವಲ್ಲವೇ?

Last Updated 20 ಅಕ್ಟೋಬರ್ 2020, 19:32 IST
ಅಕ್ಷರ ಗಾತ್ರ

ಜೆಡಿಎಸ್‌ ಮುಖಂಡ ಎಚ್‌.ಡಿ.ಕುಮಾರಸ್ವಾಮಿ ಅವರು ‘ಶಿಕ್ಷಕರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಪುಟ್ಟಣ್ಣ ಅವರ ಕುಟುಂಬದ ಸುಮಾರು 10-12 ಜನರಿಗೆ ಕ್ಲಾಸ್ ವನ್ ಅಧಿಕಾರಿಗಳ ಕೆಲಸ ಕೊಡಿಸಿದ್ದೇನೆ...’ ಎಂದು ಕೆಲವು ಶಿಕ್ಷಕರ ಮುಂದೆ ಬಹಿರಂಗವಾಗಿ ಹೇಳಿಕೊಂಡಿದ್ದಾರೆ ಎಂದು ವರದಿಯಾಗಿದೆ (ಪ್ರ.ವಾ., ಅ.20). ಇದರ ಅರ್ಥವೇನು?

ರಾಜ್ಯ ಮಟ್ಟದಲ್ಲಿ ಅತ್ಯುನ್ನತ ಹುದ್ದೆಗಳಾದ ಕ್ಲಾಸ್ ವನ್ ಕೆಲಸಕ್ಕಾಗಿ ಆಯ್ಕೆ ಮಾಡುವುದು ಲೋಕಸೇವಾ ಆಯೋಗದ ಸಾಂವಿಧಾನಿಕ ಜವಾಬ್ದಾರಿ. ಮುಖ್ಯಮಂತ್ರಿಯಾಗಿದ್ದಾಗ ತಮ್ಮ ಹುದ್ದೆಯ ಬಲದಿಂದ ಇಷ್ಟೊಂದು ಸರ್ಕಾರಿ ಕೆಲಸಗಳನ್ನು ಒಂದೇ ಕುಟುಂಬಕ್ಕೆ ಕೊಡಿಸಿದ್ದು ನಿಜವೇ ಆಗಿದ್ದಲ್ಲಿ, ಅಧಿಕಾರದ ದುರ್ಬಳಕೆ ಮಾಡಿಕೊಂಡಿರುವುದಕ್ಕೆ ಇದಕ್ಕಿಂತ ದೊಡ್ಡ ಪುರಾವೆ, ಉದಾಹರಣೆ ಬೇಕೇ? ಈ ರೀತಿ ಕ್ಲಾಸ್ ವನ್ ಉದ್ಯೋಗ ಪಡೆದ ಅಧಿಕಾರಿಗಳು ಯಾರು? ಅವರ ಅರ್ಹತೆ ಏನು? ಅವರು ಪ್ರಸ್ತುತ ಯಾವ ಯಾವ ಹುದ್ದೆಗಳಲ್ಲಿದ್ದಾರೆ? ತಮ್ಮ ಸ್ವಂತ ಮನೆಯ ಆಸ್ತಿಯಂತೆ ಹುದ್ದೆಗಳನ್ನು ಕೊಡಿಸಿದ ಈ ನಾಯಕನ ನಡೆ ಘೋರ ಅಪರಾಧವಲ್ಲವೇ? ರಾಜಕೀಯ ಪ್ರಭಾವ ಇಲ್ಲದ ಕಾರಣಕ್ಕೆ ಅವಕಾಶವಂಚಿತರಾದ ಪ್ರತಿಭಾವಂತರಪಾಡೇನು?

-ಜಯಚಂದ್ ಜೈನ್, ದಾವಣಗೆರೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT