ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಾಚಕರ ವಾಣಿ | ಸಮತೆ– ಮಮತೆಗಾಗಿ ಮನಃಸ್ಥಿತಿ ಬದಲಾಗಲಿ

Last Updated 27 ಜುಲೈ 2020, 19:30 IST
ಅಕ್ಷರ ಗಾತ್ರ

‘ಗಂಡ- ಹೆಂಡತಿ ಕೂಡಿ ಕಷ್ಟಕ್ಕ ಎದಿ ಕೊಡ್ರಿ...’ ಎಂಬ ವಿಶೇಷ ವರದಿಯಲ್ಲಿ (ಪ್ರ.ವಾ., ಜುಲೈ 26) ಕೊಪ್ಪಳ ಜಿಲ್ಲೆಯ ಕವಲೂರಿನ ನಿಂಗವ್ವಜ್ಜಿಯ ಮಾತುಗಳು ಅರ್ಥಪೂರ್ಣವಾಗಿವೆ. ಇವನ್ನು ಅರ್ಥೈಸಿಕೊಂಡು ಜೀವನದಲ್ಲಿ ಅಳವಡಿಸಿಕೊಂಡರೆ ಕೌಟುಂಬಿಕ ಹಿಂಸೆಯನ್ನು ತಡೆಯಬಹುದು. ಮನೆಯಲ್ಲಾಗಲೀ, ಸಂಸಾರದಲ್ಲಾಗಲೀ, ಒಬ್ಬರನ್ನೊಬ್ಬರು ಅರ್ಥಮಾಡಿಕೊಳ್ಳುವ ಸಮಾನ ಮನಸ್ಕರು ಇಲ್ಲದಿದ್ದಾಗ ಸಮಸ್ಯೆ ಉಲ್ಬಣಗೊಳ್ಳುತ್ತದೆ. ಅತಿರೇಕದ ವರ್ತನೆಯಿಂದ ಕೌಟುಂಬಿಕ ಹಿಂಸೆಗೆ ಎಡೆಮಾಡಿಕೊಡುತ್ತದೆ.

ಆಧುನಿಕ ಕಾಲಘಟ್ಟದಲ್ಲಿ ಸಮಾಜ ಮತ್ತು ಜೀವನಶೈಲಿ ಬದಲಾದರೂ ಎಷ್ಟೇ ಕಾನೂನುಗಳಿದ್ದರೂ ನಮ್ಮ ಸಂಕುಚಿತ ಮನಃಸ್ಥಿತಿ ಬದಲಾಗದ ಹೊರತು ಸಮತೆ ಮತ್ತು ಮಮತೆಯನ್ನು ಕುಟುಂಬದಲ್ಲಿ ಕಾಣಲು ಸಾಧ್ಯವಿಲ್ಲ. ಲಿಂಗ ತಾರತಮ್ಯವನ್ನು ಹೋಗಲಾಡಿಸಿ ಮನುಷ್ಯರಾಗಿ ಜೀವಿಸೋಣ.

ಪ್ರವೀಣ ನಾಗಪ್ಪ ಯಲವಿಗಿ,ಹಾವೇರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT