ಮುಸ್ಲಿಂ ನಾಯಕತ್ವದ ಅವಜ್ಞೆ ಸರಿಯೆ?

ಪ್ರಜಾಪ್ರಭುತ್ವದಲ್ಲಿ ನೈಜ ಪ್ರತಿನಿಧಿತ್ವವು ಪ್ರತ್ಯಕ್ಷ ಚುನಾವಣೆಯ ಮೂಲಕವೇ ಬರ
ಬೇಕು. ಅಲ್ಪಸಂಖ್ಯಾತರು, ವಿಶೇಷವಾಗಿ ಮುಸ್ಲಿಮರಿಗೆ ನೇರ ಚುನಾವಣೆಯಲ್ಲಿ ಅವಕಾಶ ಕಡಿಮೆ ಮಾಡಲಾಗುತ್ತಿದೆ. ರಾಜ್ಯಸಭೆಗೆ ನೇಮಕದಂತಹ ಪರೋಕ್ಷ ಮಾರ್ಗದಲ್ಲಿ ಅವಕಾಶ ನೀಡುವುದು ಅವರ ರಾಜಕೀಯ ಬೆಳವಣಿಗೆಯನ್ನು ಸೀಮಿತಗೊಳಿಸುತ್ತದೆ. ದಾವಣಗೆರೆ, ಬಾಗಲಕೋಟೆ ಉಪಚುನಾವಣೆಯು ಇದಕ್ಕೆ ಕನ್ನಡಿ ಹಿಡಿದಿವೆ. ಮುಸ್ಲಿಂ ಸಮುದಾಯದಿಂದ ಟಿಕೆಟ್ಗಾಗಿ ಬೇಡಿಕೆ ಇದ್ದರೂ ಪರಿಗಣಿಸಿಲ್ಲ. ಎಲ್ಲಾ ಪಕ್ಷಗಳು ನೈಜ ಸಮಾನತೆ ತೋರಿಸಬೇಕಾದರೆ ಗೆಲ್ಲುವ ಕ್ಷೇತ್ರ ಗಳಲ್ಲಿ ಸಮಾನ ಅವಕಾಶ ನೀಡಬೇಕಿದೆ. ಅಲ್ಪಸಂಖ್ಯಾತರನ್ನು ನಿರ್ಲಕ್ಷಿಸಿದರೆ ಆ ಸಮುದಾಯದಲ್ಲಿ ಸಮರ್ಥ ರಾಜಕೀಯ ನಾಯಕರು ಬೆಳೆಯುವುದು ಹೇಗೆ?

⇒ಗುರಣ್ಣಗೌಡ ಪಾಟೀಲ, ಝಳಕಿ

ಸರ್ಕಾರಿ ಶಾಲೆಗಳ ವಿಲೀನ ಅವೈಜ್ಞಾನಿಕ

ಮಕ್ಕಳ ಸಂಖ್ಯೆ ಕಡಿಮೆ ಇರುವ ಶಾಲೆಗಳನ್ನು ಕರ್ನಾಟಕ ಪಬ್ಲಿಕ್ ಶಾಲೆಗಳೊಂದಿಗೆ ವಿಲೀನಗೊಳಿಸುವುದು ಅವೈಜ್ಞಾನಿಕ. ಇದು ಪರೋಕ್ಷವಾಗಿ ಗ್ರಾಮೀಣ ಭಾಗದ ಸರ್ಕಾರಿ ಶಾಲೆಗಳನ್ನು ಮುಚ್ಚುವ ಹುನ್ನಾರ. ಬಡ ಮತ್ತು ಶೋಷಿತ ವರ್ಗದ ಮಕ್ಕಳಿಗೆ ಮನೆ ಬಾಗಿಲಲ್ಲಿ ಸಿಗುತ್ತಿದ್ದ ಶಿಕ್ಷಣವನ್ನು ಕಸಿದುಕೊಂಡು ದೂರದ ಶಾಲೆ ಗಳಿಗೆ ಹೋಗುವಂತೆ ಮಾಡುವುದು ಮಕ್ಕಳ ಹಕ್ಕುಗಳ ಸ್ಪಷ್ಟ ಉಲ್ಲಂಘನೆಯಾಗಿದೆ. ಮಕ್ಕಳಿಗೆ ಸಾರಿಗೆ ವ್ಯವಸ್ಥೆ ಮಾಡುವುದಾಗಿ ಸರ್ಕಾರ ಹೇಳಿದೆ. ಆದರೆ, ಗ್ರಾಮೀಣ ರಸ್ತೆಗಳು ಉತ್ತಮವಾಗಿಲ್ಲ. ಹೆಣ್ಣುಮಕ್ಕಳನ್ನು ದೂರದ ಊರುಗಳಿಗೆ ಕಳುಹಿಸಲು ಪೋಷಕರು ಇಷ್ಟಪಡಲಾರರು. ಇದರಿಂದ ಶಾಲೆ ಬಿಡುವ ಮಕ್ಕಳ ಸಂಖ್ಯೆ ಹೆಚ್ಚಲಿದೆ. ಶಾಲೆ ಮುಚ್ಚುವ ಬದಲು ಮೂಲಸೌಕರ್ಯಕ್ಕೆ ಒತ್ತು ನೀಡಬೇಕಿದೆ.

⇒ಕೆ.ಎಸ್. ಈಶ್ವರಪ್ಪ, ದಾವಣಗೆರೆ

ಅಸಾಂವಿಧಾನಿಕ ಹುದ್ದೆಗಳಿಗೆ ದುಂದುವೆಚ್ಚ

ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷದ ಬಲವರ್ಧನೆಗಾಗಿ ಸರ್ಕಾರವು ಅಸಾಂವಿಧಾನಿಕವಾಗಿ ಹಲವಾರು ಹುದ್ದೆಗಳನ್ನು ಸೃಜಿಸಿದೆ. ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿ ಕಾರದ ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ಹುದ್ದೆ ಇದಕ್ಕೊಂದು ನಿದರ್ಶನ. ಜಿಲ್ಲಾ, ತಾಲ್ಲೂಕುಮಟ್ಟದಲ್ಲೂ ಈ ಪ್ರಾಧಿಕಾರಕ್ಕೆ ಪದಾಧಿಕಾರಿಗಳನ್ನು ನೇಮಿಸಲಾಗಿದೆ. ಕೆಲವು ನಿಗಮ, ಮಂಡಳಿಗಳ ಅಧ್ಯಕ್ಷರಿಗೆ ಲಕ್ಷಾಂತರ ರೂಪಾಯಿ ಭತ್ಯೆ ನೀಡುತ್ತಿದೆ. ರಾಜ್ಯದ ಹಲವು ಶಾಲೆಗಳಿಗೆ ಸುಸಜ್ಜಿತ ಕೊಠಡಿಗಳಿಲ್ಲ. ಹಳ್ಳಿಗಳಲ್ಲಿ ಸರಿಯಾದ ರಸ್ತೆಗಳಿಲ್ಲ. ಅನಗತ್ಯ ಹುದ್ದೆಗಳಿಗೆ ಜನರ ತೆರಿಗೆ ಹಣವನ್ನು ದುಂದುವೆಚ್ಚ ಮಾಡುವ ಸರ್ಕಾರದ ನಿಲುವು ಖಂಡನೀಯ.

⇒ವಿ.ಜಿ. ಇನಾಮದಾರ, ಸಾರವಾಡ

ಮೇಕೆ ಬಾಯಿಗೆ ಬೆಣ್ಣೆ ಒರೆಸದಿದ್ದರೆ ಸಾಕು

ಮೇಕೆದಾಟು ಯೋಜನೆಯಲ್ಲಿ ಮುಳುಗಡೆಯಾಗುವ ಅರಣ್ಯಕ್ಕೆ ಬದಲೀ ಅರಣ್ಯ
ಬೆಳೆಸಲೆಂದು ಬೆಂಗಳೂರು ಮತ್ತು ಆಸುಪಾಸಿನ ಜಿಲ್ಲೆಗಳಲ್ಲಿ 7,400 ಹೆಕ್ಟೇರ್ ಭೂಮಿಯನ್ನು ಕಾಯ್ದಿಡಲು ರಾಜ್ಯ ಸರ್ಕಾರ ನಿರ್ಧರಿಸಿದೆಯೆಂಬ ಸುದ್ದಿ ಪ್ರಕಟ ವಾಗಿದೆ (ಪ್ರ.ವಾ., ಮಾರ್ಚ್ 22). ಅಂಥ ಬದಲೀ ಜಾಗವನ್ನು ಅರಣ್ಯ ಇಲಾಖೆಯ ಮುಷ್ಟಿಯಿಂದ ಬಿಡಿಸಿ, ಸ್ಪಷ್ಟ ಫಲಕ ಹಾಕಿ, ಅಲ್ಲಿ ಗ್ರಾಮ ಪಂಚಾಯಿತಿಗಳ ಮೂಲಕ ಸ್ಥಳೀಯರೇ ಕಾಡು ಬೆಳೆಸಲು ಈಗಿನಿಂದಲೇ ಅನುಕೂಲ ಮಾಡಿಕೊಡಬೇಕು. ಇಲ್ಲ
ದಿದ್ದರೆ ಇದು ಮೇಕೆ ಬಾಯಿಗೆ ಬೆಣ್ಣೆ ಒರೆಸಿದ ಕೋತಿಯ ಕತೆ ಆಗುತ್ತದೆ.

ಮಹಾರಾಷ್ಟ್ರದಲ್ಲಿ ಬೃಹತ್ ನೀರಾವರಿ ಯೋಜನೆಗಳ ಸಂತ್ರಸ್ತರಿಗೆ ಪೂರ್ಣ ಮರು ವಸತಿ ವ್ಯವಸ್ಥೆ ಆಗುವವರೆಗೂ ಅಣೆಕಟ್ಟೆಗೆ ನೀರು ತುಂಬಿಸಬಾರದೆಂಬ ಕಾನೂನೇ ಜಾರಿಯಲ್ಲಿದೆ. ಅದು ನಮಗೂ ಮಾದರಿಯಾಗಬೇಕು. ಕಾವೇರಿ ವನ್ಯಧಾಮದ ಮತ್ತು ಆಸುಪಾಸಿನ ಮೃಗಪಕ್ಷಿ–ಗಿಡಮರಗಳಿಗೆ ಬದಲೀ ಆಸರೆ ಮೊದಲೇ ಸೃಷ್ಟಿ ಆಗಬೇಕು. ಮೇಕೆದಾಟು ಯೋಜನೆಗೆ ಕೇಂದ್ರದ ಒಪ್ಪಿಗೆ ಸಿಗದಿದ್ದರೂ ಪರ್ಯಾಯ ಅರಣ್ಯಗಳ ಮರುಸೃಷ್ಟಿ ಮಾಡಿಟ್ಟುಕೊಂಡರೆ ಅದು ಲೋಕಕಲ್ಯಾಣದ ಕೆಲಸವೇ ಆಗುತ್ತದೆ. ಮೇಲಾಗಿ ಮುಂದಿನ ಪೀಳಿಗೆಗೆ ಅನುಕರಣಯೋಗ್ಯ ಆದರ್ಶವೂ ಆಗುತ್ತದೆ.

⇒ನಾಗೇಶ ಹೆಗಡೆ, ಕೆಂಗೇರಿ

ಫಿಲ್ಟರ್ ನೀರು: ಗುಣಮಟ್ಟ ಪರೀಕ್ಷೆ ಅಗತ್ಯ

ರಾಜ್ಯದಲ್ಲಿ ದಿನೇ ದಿನೇ ಬಿಸಿಲಿನ ತಾಪ ಹೆಚ್ಚುತ್ತಿದೆ. ಇಂತಹ ಸಂದರ್ಭದಲ್ಲಿ ಸಾರ್ವಜನಿಕರು ದೂರ ಪ್ರಯಾಣ ಮಾಡುವ ವೇಳೆ ಕುಡಿಯಲು ನೀರಿನ ಬಾಟಲ್ ಖರೀದಿಸುವುದು ಅನಿವಾರ್ಯ. ಆದರೆ, ಕೆಲವು ವ್ಯಾಪಾರಿಗಳು ಹಣದಾಸೆಗಾಗಿ ಫಿಲ್ಟರ್ ನೀರು ಎಂದು ಬಾಟಲ್ಗಳಿಗೆ ಯಾವುದೋ ಕಂಪನಿಯ ಲೇಬಲ್ ಅಂಟಿಸಿ, ಬಸ್ನಿಲ್ದಾಣ, ಹೋಟೆಲ್, ರೆಸ್ಟೋರೆಂಟ್ಗಳಲ್ಲಿ ಮಾರಾಟ ಮಾಡುತ್ತಿ ದ್ದಾರೆ. ಈ ನೀರನ್ನು ವೈಜ್ಞಾನಿಕವಾಗಿ ಶುದ್ಧೀಕರಿಸಲಾಗಿದೆಯೇ ಎಂಬ ಬಗ್ಗೆ ಗ್ರಾಹಕರಿಗೆ ಖಾತರಿ ಇರುವುದಿಲ್ಲ. ಬಾಟಲ್ಗಳ ಮೇಲಿನ ಲೇಬಲ್ನಲ್ಲೂ ತಯಾರಿಕೆಗೆ ಸಂಬಂಧಿಸಿದ ವಿವರಗಳು ಸ್ಪಷ್ಟವಾಗಿರುವುದಿಲ್ಲ. ಈ ಬಗ್ಗೆ ಸರ್ಕಾರ ತಜ್ಞರ ಸಮಿತಿ ರಚಿಸಿ ಪರಿಶೀಲಿಸಬೇಕಿದೆ.

⇒ಸುರೇಶ ಅರಳಿಮರ, ಬಾದಾಮಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.