ಬುಧವಾರ, ಜನವರಿ 22, 2020
24 °C

ಜಾತಿಯೇ ಪ್ರಧಾನ ಅರ್ಹತೆ ಆಗದಿರಲಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

‘ದಲಿತ ಎಂಬ ಕಾರಣಕ್ಕೆ ನನಗೆ ಮುಖ್ಯಮಂತ್ರಿ ಪಟ್ಟ ಬೇಡ’ ಎಂದು ಕಾಂಗ್ರೆಸ್ ಮುಖಂಡ ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ (ಪ್ರ.ವಾ., ಡಿ. 5). ನಿಜ, ಅವರು ಹೇಳಿದಂತೆ ಜಾತಿ, ಮತದ ಕಾರಣಕ್ಕೆ ಮುಖ್ಯಮಂತ್ರಿ ಪಟ್ಟ ಮಾತ್ರವಲ್ಲ ಯಾವುದೇ ರಾಜಕೀಯ ಅಧಿಕಾರ ಪಟ್ಟವೂ ದೊರಕಬಾರದು. ಜಾತಿ, ಧರ್ಮ ಯಾವುದೇ ಇದ್ದರೂ ನಿಜವಾದ ಸಮಾಜಸೇವೆ ಮಾಡುವಂತಹವರಿಗೆ ಆದ್ಯತೆ ನೀಡಬೇಕು. ಆದರೆ ಪ್ರತಿಯೊಂದು ವಿಚಾರದಲ್ಲೂ ಜಾತಿಯೇ ಪ್ರಧಾನ ಅರ್ಹತೆ ಆಗಿರುವುದು ದುರಂತ. ಈ ವಿಧಾನ ಇನ್ನು ಮುಂದಾದರೂ ಬದಲಾಗಲಿ.

-ಪತ್ತಂಗಿ ಎಸ್. ಮುರಳಿ, ಬೆಂಗಳೂರು

ಪ್ರತಿಕ್ರಿಯಿಸಿ (+)