ಗುರುವಾರ , ನವೆಂಬರ್ 21, 2019
25 °C

‘ಕೊಡಗು ಪ್ರವಾಸೋದ್ಯಮಕ್ಕೆ ಕಪ್ಪುಚುಕ್ಕೆ’ ವರದಿಗೆ ಓದುಗರ ಪ್ರತಿಕ್ರಿಯೆ

Published:
Updated:

ಕೊಡಗು ಪ್ರವಾಸೋದ್ಯಮಕ್ಕೆ ಕಪ್ಪುಚುಕ್ಕೆ’ ವಿಶೇಷ ವರದಿ ಓದಿ (ಪ್ರ.ವಾ., ನ. 5) ತುಂಬಾ ಬೇಸರವಾಯಿತು. ಅನಧಿಕೃತ ಹೋಮ್‌ ಸ್ಟೇಗಳಿಂದಾಗಿ ಇಡೀ ಕೊಡಗಿಗೆ ಕೆಟ್ಟ ಹೆಸರು. ಪ್ರವಾಸೋದ್ಯಮ ಇಲಾಖೆಯು ಇತ್ತ ಗಮನ ಹರಿಸುವುದು ಸೂಕ್ತ.

ಇದರ ಜೊತೆಗೆ, ಎಲ್ಲ ಬಗೆಯ ಅನುಮತಿ ಪಡೆದು, ನಿಯಮಾನುಸಾರ ಹೋಮ್‌ ಸ್ಟೇ ನಡೆಸುತ್ತಿರುವ ಮಾಲೀಕರು ಸಹ ಅನೈತಿಕ ಚಟುವಟಿಕೆಗಳನ್ನು ಗಂಭೀರವಾಗಿ ಪರಿಗಣಿಸಬೇಕಿದೆ. ‘ಕರ್ನಾಟಕದ ಕಾಶ್ಮೀರ’ ಎಂದು ಹೆಸರು ಪಡೆದಿರುವ ಕೊಡಗಿನ ಪ್ರಕೃತಿ ಸೌಂದರ್ಯವನ್ನು ಸವಿಯಬೇಕೇ ವಿನಾ ಅದನ್ನು ಕೆಡಿಸಲು ಹೋಗಬಾರದು. ಅಂತಹವರ ವಿರುದ್ಧ ಕ್ರಮ ಅಗತ್ಯ.
-ಅ.ಮೃತ್ಯುಂಜಯ, ಪಾಂಡವಪುರ

 

ಪ್ರತಿಕ್ರಿಯಿಸಿ (+)