ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಾಚಕರ ವಾಣಿ | ವಿವಾದಾತ್ಮಕ ಹೇಳಿಕೆ: ಶಾಸಕರ ಸಮಿತಿ ರಚಿಸಿ

ಅಕ್ಷರ ಗಾತ್ರ

ರಾಜಕಾರಣಿಗಳ ವಿವಾದಾತ್ಮಕ ಹೇಳಿಕೆಗಳು ನಿತ್ಯ ಒಂದಲ್ಲ ಒಂದು ರೀತಿಯಲ್ಲಿ ಸಾಮಾಜಿಕವಾಗಿ ಅನಗತ್ಯ ಘರ್ಷಣೆಗಳಿಗೆ ಕಾರಣವಾಗುತ್ತಿವೆ. ಅವರ ಇಂಥ ನಡೆಯು ಜನರ ನಿತ್ಯದ ಬದುಕಿನ ಸಮಸ್ಯೆಗಳ ಪರಿಹಾರಕ್ಕಾಗಲಿ ಅಥವಾ ರಾಜ್ಯದ ಅಭಿವೃದ್ಧಿಗಾಗಲಿ ಉಪಯೋಗಕ್ಕೆ ಬರುವುದಿಲ್ಲ. ರಾಜಕಾರಣಿಗಳು ಸದನದ ಹೊರಗೆ ನೀಡುವ ವೈಯಕ್ತಿಕ ಹೇಳಿಕೆಗಳಿಂದ ಉದ್ಭವವಾಗುವ ವಿವಾದಗಳು ಶಾಸನಸಭೆಗಳಲ್ಲಿ ಚರ್ಚೆಯಾಗಬೇಕೆ? ಬೇಕು ಎನ್ನುವುದಾದರೆ ಇದಕ್ಕೊಂದು ಶಾಸಕರ ಸಮಿತಿ ರಚಿಸಿ, ಅದರ ಮೂಲಕವೇ ಇಂಥ ವಿವಾದಗಳನ್ನು ಪರಿಹರಿಸಿಕೊಳ್ಳುವಂತೆ ಆಗಬೇಕು. ಆಗ ಆರೋಪ, ಪ್ರತ್ಯಾರೋಪ, ಸಮರ್ಥನೆ, ಕ್ಷಮೆಯಾಚನೆಯಂಥ ಅನಗತ್ಯವಾದ ನಾಟಕೀಯ ಬೆಳವಣಿಗೆಗಳು ಮಾಧ್ಯಮಗಳ ಮುಖಾಂತರ ಯುವಜನರನ್ನು ತಲುಪುವುದು, ಅದರಿಂದ ಸಮಾಜದ ಸ್ವಾಸ್ಥ್ಯ ಹಾಳಾಗುವುದು ತಪ್ಪುತ್ತದೆ.

- ಡಾ. ಜಿ.ಬೈರೇಗೌಡ, ಬೆಂಗಳೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT