ಬುಧವಾರ, ನವೆಂಬರ್ 13, 2019
25 °C

ವೈದ್ಯರೇ, ರೋಗ ಪತ್ತೆಹಚ್ಚಿ! : ಜೆಡಿಎಸ್ ನಾಯಕ ಎಚ್‌ಡಿಕೆ ಹೇಳಿಕೆಗೆ ಪ್ರತಿಕ್ರಿಯೆ

Published:
Updated:

‘ನಮ್ಮದೇ ಪಕ್ಷದ ಶಾಸಕರು ನನ್ನ ವಿರುದ್ಧ ಸಿಟ್ಟು ಮಾಡಿಕೊಂಡಿದ್ದಾರೆ ಎಂಬುದು ನನ್ನ ಗಮನಕ್ಕೆ ಬಂದಿಲ್ಲ. ಚಿಕಿತ್ಸೆ ನೀಡುವುದಕ್ಕೆ ರೋಗ ಏನು ಅಂತ ಬಂದು ಹೇಳಿಕೊಂಡರೆ ತಾನೇ ಗೊತ್ತಾಗುವುದು?’ ಎಂದು ಜೆಡಿಎಸ್ ನಾಯಕ ಎಚ್.ಡಿ. ಕುಮಾರಸ್ವಾಮಿ ಕಟಕಿಯಾಡಿದ್ದಾರೆ (ಪ್ರ.ವಾ., ನ.3).

ಸ್ವಾಮಿ ವೈದ್ಯರೇ...! ತನಗೆ ಬಂದಿರುವುದು ಯಾವ ರೋಗ ಎಂಬುದು ಎಷ್ಟೋ ಬಾರಿ ರೋಗಿಗೇ ತಿಳಿದಿರುವುದಿಲ್ಲ. ಹಲವು ಬಾರಿ, ಹೇಳಿಕೊಂಡರೂ ವೈದ್ಯನ ಕಿವಿಗೆ ತಟ್ಟಿರುವುದಿಲ್ಲ. ಅನಾಹುತ ಸಂಭವಿಸುವ ಮೊದಲೇ ರೋಗಿಯ ರೋಗವನ್ನು ಪತ್ತೆಹಚ್ಚಿ ಚಿಕಿತ್ಸೆ ನೀಡುವವನೇ ನಿಜವಾದ ವೈದ್ಯ. ಅದರಲ್ಲೂ ಈ ಕಾಲದಲ್ಲಿ ರೋಗ ಪತ್ತೆ ಮಾಡುವುದಕ್ಕೆ ಅನೇಕ ಯಂತ್ರಗಳಿವೆ...! ಅವೆಲ್ಲವನ್ನೂ ಬಳಸಿಕೊಂಡು ರೋಗ ವಾಸಿ ಮಾಡಿ. ಇಲ್ಲವಾದಲ್ಲಿ, ವಾಸಿ ಮಾಡಬಲ್ಲ ಪಕ್ಕದ ಆಸ್ಪತ್ರೆಗೆ ರೋಗಿ ಹೋಗಿಯೇ ಹೋಗುತ್ತಾನೆ. ಅದಾಗುವುದಕ್ಕೆ ಮೊದಲೇ ಆ ರೋಗಿಗೆ ತಮ್ಮ ಆಸ್ಪತ್ರೆಯಲ್ಲೇ ಚಿಕಿತ್ಸೆ ನೀಡಿ ನಿಜವಾದ ವೈದ್ಯರಾಗಿ.
-ಪತ್ತಂಗಿ ಎಸ್. ಮುರಳಿ, ಬೆಂಗಳೂರು

ಪ್ರತಿಕ್ರಿಯಿಸಿ (+)