ಶುಕ್ರವಾರ, ಸೆಪ್ಟೆಂಬರ್ 24, 2021
24 °C

ವಾಚಕರ ವಾಣಿ | ಸುರಕ್ಷತೆಯ ಅರಿವು ಸಂಸ್ಕೃತಿಯಾಗಬೇಕು

ವಾಚಕರ ವಾಣಿ Updated:

ಅಕ್ಷರ ಗಾತ್ರ : | |

ತುಮಕೂರು ಜಿಲ್ಲೆಯ ಗ್ರಾಮವೊಂದರ ಶಾಲೆಯಲ್ಲಿ ಧ್ವಜಸ್ತಂಭ ಅಳವಡಿಸುವಾಗ ವಿದ್ಯುತ್ ಸ್ಪರ್ಶದಿಂದ
ವಿದ್ಯಾರ್ಥಿಯೊಬ್ಬ ಮೃತಪಟ್ಟ ಘಟನೆ ಅತೀವ ದುಃಖ ತರುವಂಥದ್ದು (ಪ್ರ.ವಾ., ಆ. 16). ಶಿಕ್ಷಣ ಸಚಿವರು ಸಹಜವಾಗಿ ಈ ಘಟನೆ ಬಗ್ಗೆ ತನಿಖೆಗೆ ಆದೇಶಿಸಿದ್ದಾರೆ. ತನಿಖೆಯ ನಂತರ ಅಪಘಾತದ ಮೂಲ ಕಾರಣ ಜನರಿಗೆ ತಿಳಿಯುವಂತಾದರೆ ಇಂಥ ಅಪಘಾತಗಳು ಮರುಕಳಿಸದಂತೆ ಮಾಡಬಹುದು. ಶಾಲಾ ಹಂತದಲ್ಲಿಯೇ ಸುರಕ್ಷತೆ ಬಗ್ಗೆ ತಿಳಿವಳಿಕೆ ನೀಡುವುದರಿಂದ ಸುರಕ್ಷತೆ ಎಂಬುದು ಮಕ್ಕಳಲ್ಲಿ ಒಂದು ಸಂಸ್ಕೃತಿಯಾಗಿ ಬೆಳೆಯುತ್ತದೆ.

ಸಣ್ಣ ಸಣ್ಣ ಅಪಘಾತಗಳನ್ನು ತಪ್ಪಿಸಲು ಅಗತ್ಯವಾದ ಕೌಶಲಗಳನ್ನು ಬೆಳೆಸಲು ಸಾಧ್ಯವಾದರೆ, ದೊಡ್ಡ ದೊಡ್ಡ ಅಪಘಾತಗಳನ್ನು ತಡೆಯಬಹುದು ಎಂಬುದು ವೈಜ್ಞಾನಿಕವಾಗಿ ರುಜುವಾತಾಗಿದೆ. ಹೀಗೆ, ಶಾಲಾ ಹಂತದಲ್ಲಿಯೇ ಬೆಳೆಸಿಕೊಂಡ ಸುರಕ್ಷಾ ಸಂಸ್ಕೃತಿಯು ಮುಂದೆ ಉದ್ಯೋಗ ಸ್ಥಳದಲ್ಲಿ ಒಂದು ಮನೋಭಾವವಾಗಿ ಉಳಿಯುತ್ತದೆ. ಈ ದಿಸೆಯಲ್ಲಿ ಪ್ರತೀ ಶಾಲೆಯಲ್ಲಿ ಕನಿಷ್ಠ ಒಬ್ಬ ಶಿಕ್ಷಕರಿಗೆ ಸುರಕ್ಷತಾ ನಿಯಮಗಳ ಬಗ್ಗೆ ತರಬೇತಿ ನೀಡಲು ಸರ್ಕಾರ ಚಿಂತಿಸಬೇಕು.     

- ಡಾ. ಜಿ.ಬೈರೇಗೌಡ, ಬೆಂಗಳೂರು

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು