ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಾಚಕರ ವಾಣಿ | ದೃಢ ವಿಶ್ವಾಸದೊಂದಿಗೆ ಮತ್ತೆ ಪ್ರಯತ್ನಿಸಿ...

Last Updated 29 ಜುಲೈ 2020, 19:30 IST
ಅಕ್ಷರ ಗಾತ್ರ

ಎಸ್ಎಸ್ಎಲ್‌ಸಿ ಪರೀಕ್ಷೆಯ ಫಲಿತಾಂಶ ಸದ್ಯದಲ್ಲೇ ಹೊರಬೀಳಲಿದೆ. ಈ ಬಾರಿ ಕೊರೊನಾ ಸೋಂಕಿನ ಆತಂಕದಲ್ಲಿ ಮಕ್ಕಳು ಹೇಗೋ ಪರೀಕ್ಷೆ ಬರೆದಿದ್ದಾರೆ. ಲಾಕ್‌ಡೌನ್‌ ಪರಿಣಾಮದಿಂದ ಕೆಲ ಮಕ್ಕಳು ಸರಿಯಾಗಿ ಪರೀಕ್ಷಾ ಸಿದ್ಧತೆ ನಡೆಸಿರಲಿಲ್ಲ. ಹೀಗಾಗಿ ಶಿಕ್ಷಣ ಇಲಾಖೆಯು ಫಲಿತಾಂಶದಲ್ಲಿ ಈ ಪರಿಣಾಮದ ಹಿನ್ನೆಲೆಯಲ್ಲಿ ಸಣ್ಣಬದಲಾವಣೆ ಮಾಡಿಕೊಳ್ಳುವುದು ಒಳಿತು. ಈ ಬಾರಿ
‘ಉತ್ತೀರ್ಣ’ ಅಥವಾ ‘ಅನುತ್ತೀರ್ಣ’ ಎಂದು ನಮೂದಿಸುವ ಬದಲು, ಉತ್ತೀರ್ಣರಾದವರ ಅಂಕಪಟ್ಟಿ
ಯಲ್ಲಿ ‘ದೃಢ ವಿಶ್ವಾಸದೊಂದಿಗೆ ಯಶಸ್ಸು ಗಳಿಸಿದವರು’ ಮತ್ತು ಅನುತ್ತೀರ್ಣರಾದವರ ಅಂಕಪಟ್ಟಿಯಲ್ಲಿ ‘ದೃಢ ವಿಶ್ವಾಸದೊಂದಿಗೆ ಮತ್ತೊಮ್ಮೆ ಪ್ರಯತ್ನಿಸಿ ಯಶಸ್ಸು ಗಳಿಸುವವರು’ ಎಂದು ದಾಖಲಿಸುವುದು ಉತ್ತಮ. ಇದು ಮಕ್ಕಳಲ್ಲಿ ‘ಪಾಸ್’ ಮತ್ತು ‘ಫೇಲ್’ ಎನ್ನುವ ಪದಗಳು ಹುಟ್ಟಿಸುವ ಹಿರಿಮೆ ಮತ್ತು ಕೀಳರಿಮೆಯನ್ನು
ದೂರ ಮಾಡಬಲ್ಲದು.

ದೃಢ ವಿಶ್ವಾಸದೊಂದಿಗೆ ಮತ್ತೊಮ್ಮೆ ಪ್ರಯತ್ನಿಸಿ ಎನ್ನುವುದು, ಅನುತ್ತೀರ್ಣರಾದ ಮಕ್ಕಳಲ್ಲಿ ಸಕಾರಾತ್ಮಕ ಭಾವನೆಯನ್ನು ಉತ್ತೇಜಿಸುತ್ತದೆ. ಈ ಬದಲಾವಣೆಯನ್ನು ನಿರಂತರವಾಗಿ ಅಳವಡಿಸಿಕೊಳ್ಳುವುದರಿಂದ ವಿದ್ಯಾರ್ಥಿಗಳಲ್ಲಿ ಆತ್ಮವಿಶ್ವಾಸವನ್ನು ಬೆಳೆಸಿದಂತೆ ಆಗುತ್ತದೆ.

ಎಸ್.ಸಿ.ರೇಣುಕಾಂಜಲಿ,ಕೊಟ್ಟೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT