ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಾಚಕರ ವಾಣಿ: ಕಾಳಜಿರಹಿತ ವ್ಯಾವಹಾರಿಕ ನಡೆ

ಅಕ್ಷರ ಗಾತ್ರ

ವಿದ್ಯೆ ಕಲಿಯಲು ಬಸ್‌ನಲ್ಲಿ ಹೋಗುವವರು ಇತರ ಪ್ರಯಾಣಿಕರಿಗೆ ಅನನುಕೂಲ ಆಗದಂತೆ ವ್ಯವಹರಿಸುವ ಬಗ್ಗೆ ಕಾಳಜಿಯಿಂದ ಪ.ರಾಮಕೃಷ್ಣ ಶಾಸ್ತ್ರಿ ಅವರು ಬರೆದಿದ್ದನ್ನು (ಸಂಗತ, ಫೆ. 21) ಓದಿದಾಗ, ಕೆಲ ವರ್ಷಗಳ ಹಿಂದೆ ನಡೆದ ಘಟನೆ ನನಗೆ ನೆನಪಾಯಿತು. ಬಸ್‌ ನಿಲ್ದಾಣದಲ್ಲಿ 20–25 ವಿದ್ಯಾರ್ಥಿಗಳು ಕಾಲೇಜಿಗೆ ಹೋಗಲು, ಇನ್ನೇನು ಹೊರಡುವುದರಲ್ಲಿದ್ದ ಬಸ್ಸೊಂದನ್ನು ಏರಿ ಕುಳಿತಿದ್ದರು. ಚಾಲಕ ಗಾಡಿ ಚಾಲೂ ಮಾಡಲು ಎಷ್ಟೇ ಪ್ರಯತ್ನ ಮಾಡಿದರೂ ಎಂಜಿನ್ ಚಾಲೂ ಆಗುತ್ತಿರಲಿಲ್ಲ. ಸೋತ ಆತ ಒಳಗೆ ಕುಳಿತ ಪ್ರಯಾಣಿಕರನ್ನು, ‘ದಯವಿಟ್ಟು ಯಾರಾದರೂ ನಾಲ್ಕು ಜನ ಕೆಳಗಿಳಿದು ಬಸ್ ದೂಡಿ.‌ ದೂಡಿದರೆ ಗಾಡಿ ಚಾಲೂ ಆಗುತ್ತದೆ. ಆಗ ಎಲ್ಲರೂ ಹೋಗಬಹುದು’ ಎಂದು ಕೋರಿದ. ಆಗ, ಆ ವಿದ್ಯಾರ್ಥಿಗಳು ದಡಬಡನೆ ಇಳಿದು ದುಡುದುಡನೆ ಓಡಿದರು. ನೋಡಿದರೆ, ಅದೇ ಆಗತಾನೇ ನಿಲ್ದಾಣದ ಒಳಗೆ ಬಂದ ಬಸ್ಸನ್ನು ಏರಲು ಇವರು ಓಡಿದ್ದು. ಒಬ್ಬರಿಗೂ ಈ ಬಸ್ ಬಗ್ಗೆ ಚಿಂತೆ ಇರಲಿಲ್ಲ. ಚಾಲಕ ಹಣೆ ಚಚ್ಚಿಕೊಂಡ! ಯಾವ ಬಸ್ಸಾದರೂ ಅವರಿಗೆ ಒಂದೇ. ಟಿಕೆಟ್ ತೆಗೆದುಕೊಳ್ಳುವ ಅವಶ್ಯಕತೆ ಇಲ್ಲ. ಅವರೆಲ್ಲರೂ ರಿಯಾ ಯಿತಿ ದರದ ಬಸ್‌ಪಾಸ್ ಪಡೆದವರಾಗಿದ್ದರು!

–ಡಾ.ಈಶ್ವರ ಶಾಸ್ತ್ರಿ ಮೋಟಿನಸರ, ಶಿರಸಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT