ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಧ್ವನಿವರ್ಧಕ: ಒಂದು ವ್ಯಾಧಿ!

Last Updated 12 ಜನವರಿ 2020, 17:28 IST
ಅಕ್ಷರ ಗಾತ್ರ

ನಮ್ಮ ದೇಶದಲ್ಲಿ ಧ್ವನಿವರ್ಧಕದ ಬಳಕೆ ಒಂದು ವ್ಯಾಧಿಯಾಗಿ ಉಲ್ಬಣಿಸುತ್ತಿದೆ. ಇದರ ದುಷ್ಪರಿಣಾಮಗಳನ್ನು ಯಾರೂ ಗಣನೆಗೆ ತೆಗೆದುಕೊಳ್ಳುತ್ತಿಲ್ಲ. ವಿಧಿ ಇಲ್ಲದೆ ಜನ ಈ ಹಿಂಸೆ ಸಹಿಸಿಕೊಂಡು
ಬದುಕುತ್ತಿದ್ದಾರೆ. ಅಧಿಕಾರಿಗಳು, ಜನಪ್ರತಿನಿಧಿಗಳು, ಪೊಲೀಸರು ಸಹ ಮೂಕರಾಗಿದ್ದಾರೆ. ಇವರು, ಕಾನೂನುಗಳನ್ನು ಜಾರಿಗೊಳಿಸಲಾಗದಷ್ಟು ನಿಸ್ಸಹಾಯಕರಾಗಿದ್ದಾರೆ.

ಎಲ್ಲರೂ ಧರ್ಮಕ್ಕೆ, ಜಾತಿಗೆ, ಪ್ರಭಾವಕ್ಕೆ ಮಣಿಯುತ್ತಲೇ ಕೈ ಕಟ್ಟಿ ಕುಳಿತಿದ್ದಾರೆ. ಇಲ್ಲಿ ಕಾನೂನುಗಳು ಕಾಲು ಮುರಿದುಕೊಂಡು ಕುಳಿತಿವೆ. ಶಬ್ದಮಾಲಿನ್ಯದ ದುಷ್ಪರಿಣಾಮಗಳನ್ನು ಯಾರೂ ಗಂಭೀರವಾಗಿ
ತೆಗೆದುಕೊಳ್ಳದಿರುವುದು ಈ ದೇಶದ ನಾಗರಿಕರ ದುರದೃಷ್ಟ. ಸ್ವಾತಂತ್ರ್ಯದ ಅರ್ಥ ಸ್ವೇಚ್ಛೆ ಎಂಬಲ್ಲಿಗೆ ಬಂದು ನಿಂತಿದೆ. ಅವೇಳೆಯಲ್ಲಿ ಧ್ವನಿವರ್ಧಕಗಳನ್ನು ವಿವೇಚನೆ ಇಲ್ಲದೆ ದೊಡ್ಡ ಧ್ವನಿಯಲ್ಲಿ ಬಳಸುತ್ತಾ ವಿಕೃತವಾಗಿ ಸುಖಿಸುವ ಪರಿಪಾಟಕ್ಕೆ ಕೊನೆ ಬೇಕು.

ಎಂ.ಕೆ.ವಾಸುದೇವರಾಜು,ಮೈಸೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT