ಶನಿವಾರ, ನವೆಂಬರ್ 28, 2020
22 °C

ವಾಚಕರ ವಾಣಿ: ಘೋರ ಅಪರಾಧ: ಕ್ಷಮೆಗೆ ಅರ್ಹವಲ್ಲ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರಿನಲ್ಲಿ ಮೂವರು ಮಕ್ಕಳನ್ನು ಕೊಂದು ತಂದೆ ಆತ್ಮಹತ್ಯೆ ಮಾಡಿಕೊಂಡ (ಪ್ರ.ವಾ., ನ. 14), ಚಿತ್ರದುರ್ಗದಲ್ಲಿ ಮಹಿಳೆಯೊಬ್ಬರು ತಮ್ಮ ಮೂವರು ಮಕ್ಕಳೊಂದಿಗೆ ಹಾರಂಗಿ ನಾಲೆಗೆ ಹಾರಿದ (ಪ್ರ.ವಾ., ನ.15) ಸುದ್ದಿ ಗಳನ್ನು ಓದಿದರೆ ಎಂಥ ಕಲ್ಲು ಹೃದಯದವರಿಗೂ ಸಂಕಟವಾಗದಿರದು. ಈ ಎರಡೂ ಪ್ರಕರಣಗಳಲ್ಲಿ ತಂದೆ ಮತ್ತು ತಾಯಿ ಇನ್ನೂ ಮನಸ್ಸು ಪಕ್ವವಾಗದವರು. ಇಂತಹ ಕೃತ್ಯಕ್ಕೆ ಮುಂದಾಗುವವರು ಮಕ್ಕಳನ್ನು ಕೊಂದು ಅವು ಅನಾಥರಾಗುವುದನ್ನು ತಪ್ಪಿಸುವುದಕ್ಕಿಂತ, ಮಕ್ಕಳಿಗಾಗಿ ತಮ್ಮ ಕಷ್ಟಗಳನ್ನು ಅನುಭವಿಸಿ, ತಾವು ಉಳಿದುಕೊಂಡು, ಮಕ್ಕಳು ಅನಾಥರಾಗುವುದನ್ನು ತಪ್ಪಿಸುವ ಯೋಚನೆಯನ್ನು ಮಾಡಬೇಕು. ಮಕ್ಕಳ ಆಟ-ಪಾಠ ನೋಡಿಕೊಂಡು ತಮ್ಮ ನೋವು ಮರೆಯುವ ಎಲ್ಲಾ ಸಾಧ್ಯತೆಗಳಿರುವಾಗ, ಅವರನ್ನು ಕೊಲ್ಲುವಂಥ ಕೆಲಸಕ್ಕೆ ಇಳಿಯುವ ತಂದೆ-ತಾಯಿಯ ಅಪರಾಧ ಕ್ಷಮೆಗೆ ಅರ್ಹವಲ್ಲ. ಮಕ್ಕಳು ಸಮಾಜದ ಆಸ್ತಿ. ಅವರನ್ನು ಕೊಲ್ಲುವ ಹಕ್ಕು ಯಾರಿಗೂ ಇಲ್ಲ.

-ಸಿ.ಚಿಕ್ಕತಿಮ್ಮಯ್ಯ ಹಂದನಕೆರೆ, ಬೆಂಗಳೂರು

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು