ಭಾನುವಾರ, ನವೆಂಬರ್ 29, 2020
21 °C

ವಾಚಕರ ವಾಣಿ: ಕಾಸಿನ ಸಂಘ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

‘ಅಜ್ಜನ ಬಾಯಿಂದ ಆಂಗ್ಲ ಪದ ಬಂದರೆ ಬೆಟ್‌!’ (ಪ್ರ.ವಾ., ನ. 2). ಈ ವಿದ್ಯಮಾನ ಹೊಸದೇನಲ್ಲ; ಹಳೆಯದೇ! ನವೋದಯ ಕಾಲದಲ್ಲಿ ಮೈಸೂರಿನ ಮಹಾರಾಜಾ ಕಾಲೇಜಿನಲ್ಲಿ ‘ಕಾಸಿನ ಸಂಘ’ ಎಂಬುದೊಂದಿತ್ತು. ಅದರ ಸದಸ್ಯರು ಒಂದೇ ಒಂದು ಇಂಗ್ಲಿಷ್‌ ಪದವನ್ನೂ ಬಳಸಕೂಡದೆಂದುನಿಯಮ; ಅಕಸ್ಮಾತ್‌ ಬಳಸಿದರೆ, ಪದಕ್ಕೊಂದು ಕಾಸು ದಂಡ ವಿಧಿಸಲಾಗುತ್ತಿತ್ತು! ಹೀಗಾಗಿ, ಪ್ರತಿಯೊಬ್ಬರೂ ಇನ್ನೊಬ್ಬರ ಬಾಯಿ ಕಾಯುತ್ತಿದ್ದರು; ಅಪ್ಪಿತಪ್ಪಿ ಇಂಗ್ಲಿಷ್‌ ಪದ ಉದುರಿದರೆ, ‘ಬಿತ್ತು ಒಂದು ಕಾಸು’ ಎನ್ನುತ್ತಿದ್ದರು. ಕಡೆಗೆ ಸಂಘದ ನಿಷ್ಪ್ರಯೋಜಕತೆಯನ್ನು ಮನಗಂಡು ಅದನ್ನು ವಿಸರ್ಜಿಸಲಾಯಿತು!

ಈಗಲೂ ಅಂಥ ಸಂಘದ ಅಗತ್ಯವಿದೆ, ಇನ್ನೂ ಮಿಗಿಲಾಗಿ. ಆದರೆ ಕಾಸಲ್ಲ, ಇದು ರೂಪಾಯಿ ಕಾಲ. ಆದರೂ ಸಾಂಕೇತಿಕವಾಗಿ ‘ಕಾಸಿನ ಸಂಘ’ ಎಂಬ ಹೆಸರನ್ನು ಇಟ್ಟು ಪುನರುಜ್ಜೀವಿಸಬಹುದು! ಅಲ್ಲದೆ, ಪರಂಪರೆಗೆ ಚ್ಯುತಿ ಬರಬಾರದಲ್ಲವೆ?‌     

-ಸಿ.ಪಿ.ಕೆ., ಮೈಸೂರು

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು