ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಾಚಕರ ವಾಣಿ: ನಶಿಸುತ್ತಿದೆ ಮನುಷ್ಯ ಸಂಬಂಧ

Last Updated 21 ಸೆಪ್ಟೆಂಬರ್ 2021, 22:12 IST
ಅಕ್ಷರ ಗಾತ್ರ

ನಾಗರಿಕತೆಯ ನಾಗಾಲೋಟದಲ್ಲಿ ಇಂದು ಹೇಗೆ ಮಾನವೀಯತೆ ಮರೆಯಾಗಿ ಮನುಷ್ಯರನಡುವಿನ ಸಂಬಂಧಗಳು ಶಿಥಿಲವಾಗುತ್ತಿವೆ ಎಂಬುದನ್ನು ರಾಜಕುಮಾರ ಕುಲಕರ್ಣಿ ಅವರು ತುಂಬಾ ಚೆನ್ನಾಗಿ ವಿವರಿಸಿದ್ದಾರೆ (ಸಂಗತ, ಸೆ. 20).

ಹಿಂದೆ ಮಲೆನಾಡಿನ ಹಳ್ಳಿಗಳಲ್ಲಿ ನೆಂಟರು ಬಂದರೆ ಹೆಂಗಸರು ಒಂದು ಬಿಂದಿಗೆಯಲ್ಲಿ ನೀರು ತಂದು ಅವರಿಗೆ ಕಾಲು ತೊಳೆದುಕೊಳ್ಳಲು ಜಗುಲಿಯಲ್ಲಿ ಇಟ್ಟು, ಅವರದೇ ಪರಿಭಾಷೆಯಲ್ಲಿ ‘ಬಂದ್ರೇ’ ಅಂತ ತುಂಬಾ ಅಕ್ಕರೆಯಿಂದ ಮಾತನಾಡಿಸಿ, ಅವರನ್ನು ಆದರದಿಂದ ಬರಮಾಡಿಕೊಳ್ಳುತ್ತಿದ್ದರು. ನೆಂಟರು ಅಂದು ಅಲ್ಲಿಯೇ ಉಳಿದು, ಮನೆ ಮಂದಿಯೆಲ್ಲಾ ಅವರೊಂದಿಗೆ ಹರಟೆ ಹೊಡೆದು ಸಂತೋಷಪಡುತ್ತಿದ್ದರು. ಆದರೆ ಈಗ ಯಾರಲ್ಲೂ ಆ ತಾಳ್ಮೆ ಉಳಿದಿಲ್ಲ. ಮನೆಗೆ ನೆಂಟರು ಬಂದರೆ ಆ ಮನೆಯವರು ಮೊಬೈಲ್ ನೋಡುತ್ತಲೋ ಟಿ.ವಿ. ನೋಡುವುದರಲ್ಲೋ ಮುಳುಗಿಹೋಗಿ ‘ಇವನು ಯಾಕಾದರೂ ಬಂದನಪ್ಪಾ, ಎಷ್ಟೊತ್ತಿಗೆ ಹೋಗಿಯಾನೋ’ ಎಂಬಂತೆ ಕುಳಿತಿರುತ್ತಾರೆ! ಅದನ್ನು ನೋಡಿ, ಬಂದವನು ಆದಷ್ಟು ಬೇಗ ಕಾಲಿಗೆ ಬುದ್ಧಿ ಹೇಳುತ್ತಾನೆ.

ಇನ್ನು ಮನುಷ್ಯ ಮನುಷ್ಯನ ನಡುವಿನ ಎಲ್ಲಾ ಸಂಬಂಧಸೂಚಕ ಪದಗಳನ್ನೂ ಆಂಟಿ, ಅಂಕಲ್ ಎಂಬ ಪದಗಳೇ ನುಂಗಿಹಾಕಿವೆ. ಹಾಗಾಗಿ ಮನುಷ್ಯರ ನಡುವಿನ ಸಂಬಂಧಗಳು ತುಂಬಾ ಶಿಥಿಲವಾಗುತ್ತಾ ಮನುಷ್ಯನು ರಾಕ್ಷಸನಾಗುವ ಪ್ರಕ್ರಿಯೆ ಭರದಿಂದ ಸಾಗುತ್ತಿದೆ ಎನ್ನದೇ ವಿಧಿಯಿಲ್ಲ.
-ಚಾವಲ್ಮನೆ ಸುರೇಶ್ ನಾಯಕ್, ಹಾಲ್ಮತ್ತೂರು, ಕೊಪ್ಪ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT