ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಾಚಕರ ವಾಣಿ: ಆತ್ಮಹತ್ಯೆ ತಡೆ; ಬೇಕು ನೈತಿಕತೆ ಬೋಧನೆ

Last Updated 24 ಸೆಪ್ಟೆಂಬರ್ 2021, 20:44 IST
ಅಕ್ಷರ ಗಾತ್ರ

ಸಮಾಜದಲ್ಲಿ ಇತ್ತೀಚೆಗೆ ಆತ್ಮಹತ್ಯೆ ಪ್ರಕರಣಗಳು ಹೆಚ್ಚಾಗುತ್ತಿರುವುದು ವಿಷಾದನೀಯ. ಇವುಗಳ ಹಿಂದಿರುವ ನಾನಾ ಕಾರಣಗಳು ಎಂತಹವರನ್ನೂ ದಂಗುಬಡಿಸುತ್ತವೆ. ಅದರಲ್ಲಿಯೂ ಹದಿಹರೆಯದ ಹುಡುಗ, ಹುಡುಗಿಯರು ಜೀವನದಲ್ಲಿ ಜುಗುಪ್ಸೆ ಹೊಂದಿ ಆತ್ಮಹತ್ಯೆಗೆ ಶರಣಾಗುವುದು ಯಾವುದೇ ತಂದೆ-ತಾಯಿ ಸಹಿಸಿಕೊಳ್ಳಲಾರದ ವಿಚಾರ.

ಈ ಸಮಸ್ಯೆಗೆ ಪ್ರತಿಯೊಬ್ಬರೂ ಪರಿಹಾರ ಹುಡುಕಬೇಕಿದೆ. ಪೊಲೀಸರು, ಪೋಷಕರು, ಶಿಕ್ಷಕರು, ನಾಡಿನ ಚಿಂತಕರು ಈ ಕೃತ್ಯ ತಡೆಯುವ ದಿಸೆಯಲ್ಲಿ ಚಿಂತಿಸಬೇಕಿದ್ದು, ಶಾಲೆಯಲ್ಲಿ ಶಿಕ್ಷಕರು ಮಕ್ಕಳಿಗೆ ತಿಳಿವಳಿಕೆ ನೀಡಬೇಕಾಗಿದೆ. ತಂದೆ-ತಾಯಿ ಜೊತೆಗಿನ ಸಂಬಂಧದ ಬಗ್ಗೆ ಮಕ್ಕಳ ಮನಸ್ಸಿನ ಮೇಲೆ ಪ್ರಭಾವ ಬೀರಬೇಕಾಗಿದೆ.

ಶಿಕ್ಷಣ ಇಲಾಖೆ ಅಧಿಕಾರಿಗಳು ವೇಳಾಪಟ್ಟಿಯಲ್ಲಿ ಶಿಕ್ಷಕರು ನೈತಿಕತೆ ಬೋಧನೆಯನ್ನು ಅಳವಡಿಸಿಕೊಳ್ಳಲು ಅನುವು ಮಾಡಿಕೊಡಬೇಕು. ಇದು, ಮಕ್ಕಳು ಆತ್ಮಹತ್ಯೆಯಂತಹ ಘೋರ ಕೃತ್ಯದ ಮೊರೆ ಹೋಗುವುದನ್ನು ತಪ್ಪಿಸಿ, ಜೀವನದ ಸುಂದರ ಕ್ಷಣಗಳನ್ನು ಅನುಭವಿಸಲು ನೆರವಾಗಬಹುದೆಂಬ ಆಶಯ ಹುಟ್ಟಿಸುತ್ತದೆ.
-ಎಚ್.ಎಸ್.ಟಿ.ಸ್ವಾಮಿ,ಚಿತ್ರದುರ್ಗ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT