ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಿಕ್ಷಕಿಯ ಕ್ರಿಯಾಶೀಲತೆ ಅಭಿನಂದನಾರ್ಹ

Last Updated 23 ಫೆಬ್ರುವರಿ 2020, 19:45 IST
ಅಕ್ಷರ ಗಾತ್ರ

ಹೊಳಲ್ಕೆರೆ ತಾಲ್ಲೂಕಿನ ತುಪ್ಪದಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕಿ ಟಿ.ಬಿ.ಅನಿತಾ ಅವರು 5ರಿಂದ 7ನೇ ತರಗತಿಯ ಇಂಗ್ಲಿಷ್ ವಿಷಯಕ್ಕೆ ಪ್ರತ್ಯೇಕ ನಿಘಂಟು ರಚಿಸುವ ಮೂಲಕ ವಿನೂತನ ಪ್ರಯೋಗ ಮಾಡಿದ್ದಾರೆ. ಇದು ಎಲ್ಲರೂ ಮೆಚ್ಚಬೇಕಾದ ವಿಷಯ. ಇಂಗ್ಲಿಷ್ ಭಾಷೆಯನ್ನು ಪ್ರಾಥಮಿಕ ಹಂತದಲ್ಲಿ ಮಕ್ಕಳಿಗೆ ಹೊರೆಯಾಗದಂತೆ ಸುಲಭವಾಗಿ, ಸರಳವಾಗಿ ಕಲಿಸುವ ವಿಧಾನಕ್ಕೆ ಇದು ತೋರುಗಂಬ ಆಗಬಲ್ಲದು.

ಸರ್ಕಾರಿ ಶಾಲೆಗಳಲ್ಲಿ ಬೋಧನೆ ಏಕತಾನತೆಯಿಂದ ಕೂಡಿರುತ್ತದೆ ಎಂದು ಕೆಲವರು ಆರೋಪಿಸುತ್ತಾರೆ. ಅಂತಹಆರೋಪಗಳಿಗೆ ಅನಿತಾ ಅವರ ಕ್ರಿಯಾಶೀಲತೆ ತಕ್ಕ ಉತ್ತರ ನೀಡುವಂತಿದೆ. ಅವರಿಗೆ ‘ಇನೊವೇಟಿವ್ ಟೀಚರ್ ಅವಾರ್ಡ್’ ಸಹ ದೊರಕಿರುವುದು ಅಭಿನಂದನಾರ್ಹ. ಖಾಸಗಿ ಶಾಲೆಗಳ ಬಗ್ಗೆ ವ್ಯಾಮೋಹ ಹೊಂದಿರುವ ಪೋಷಕರು, ಅನಿತಾ ಅವರಂಥ ಶಿಕ್ಷಕರ ಸೃಜನಶೀಲತೆಯನ್ನು ಗಮನಿಸಬೇಕು. ತಮ್ಮ ಮಕ್ಕಳನ್ನು ಧೈರ್ಯವಾಗಿ ಸರ್ಕಾರಿ ಶಾಲೆಗಳಿಗೆ ಸೇರಿಸಲು ಮುಂದಾಗಬೇಕು.

-ಚಂದ್ರಶೇಖರ ತಾಳ್ಯ,ಹೊಳಲ್ಕೆರೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT