ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವನ್ಯಜೀವಿಯ ಸ್ಥಳಾಂತರ ಸರಿಯೇ? : ಓದುಗರ ಪ್ರಶ್ನೆ

Last Updated 5 ನವೆಂಬರ್ 2019, 20:00 IST
ಅಕ್ಷರ ಗಾತ್ರ

ಹಂಪಿಯ ವಿಜಯವಿಠಲ ದೇವಸ್ಥಾನದ ಬಳಿ ಗಾಯಗೊಂಡು ಪ್ರಜ್ಞೆ ತಪ್ಪಿದ್ದ ನರಿಯನ್ನು ಅರಣ್ಯ ಇಲಾಖೆಯ ಅಧಿಕಾರಿಗಳು ಚಿಕಿತ್ಸೆ ನೀಡಿ ರಕ್ಷಿಸಿದ್ದು ಶ್ಲಾಘನೀಯ (ಪ್ರ.ವಾ., ನ. 4). ಆದರೆ ನರಿಯನ್ನು ಅಟಲ್ ಬಿಹಾರಿ ವಾಜಪೇಯಿ ಜೈವಿಕ ಉದ್ಯಾನದಲ್ಲಿ ಬಿಟ್ಟಿದ್ದು ತಪ್ಪು. ಏಕೆಂದರೆ ಅದೊಂದು ವನ್ಯಜೀವಿ. ತನ್ನ ಜೀವಿತಾವಧಿಯಲ್ಲಿ ಮನುಷ್ಯನ ಉಪಸ್ಥಿತಿಯನ್ನು ಬಯಸದ ಅತ್ಯಂತ ನಾಚಿಕೆ ಸ್ವಭಾವದ ಜೀವಿ. ಈಗ ಇದ್ದಕ್ಕಿದ್ದಂತೆ ಅದರ ಪರಿಸರವನ್ನು ಬದಲಾಯಿಸಿದರೆ‌ ಅದು ಬದುಕುವುದು ಕಷ್ಟ.

ಜೈವಿಕ ಉದ್ಯಾನದಲ್ಲಿ ನರಿಗೆ‌ ಪ್ರತ್ಯೇಕ ಸ್ಥಳ, ಅದರ ಸಂಗಾತಿ ನರಿಯನ್ನು ಹೊಂದಿಸುವುದು ಸುಲಭದ ಕೆಲಸವಲ್ಲ. ಬಳ್ಳಾರಿಯ ಕಿರು ಮೃಗಾಲಯದಲ್ಲಿ ಗಂಡು ಹುಲಿಗೆ ಜೀವನ ಪರ್ಯಂತ ಸಂಗಾತಿ ಸಿಗದೇ ಇದ್ದದ್ದನ್ನು ಸ್ಮರಿಸಬಹುದು. ಈ ಎಲ್ಲಾ ವಿಷಯಗಳನ್ನು ಗಮನದಲ್ಲಿ ಇಟ್ಟುಕೊಂಡು, ಗಾಯ‌ ವಾಸಿಯಾದ ನಂತರ ನರಿಯನ್ನು ಮೂಲಸ್ಥಾನಕ್ಕೆ ಬಿಡುವುದು ಸೂಕ್ತ.
-ಮಹೇಶ್ವರ ಹುರುಕಡ್ಲಿ, ಬಾಚಿಗೊಂಡನಹಳ್ಳಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT