ಜನತಾ ದರ್ಶನ ಬೇಕೇ?

7

ಜನತಾ ದರ್ಶನ ಬೇಕೇ?

Published:
Updated:

ರಾಜಕೀಯ ಪಕ್ಷದ ನಾಯಕರಿಗೆ ಅಧಿಕಾರ ಸಿಕ್ಕರೆ ಒಬ್ಬೊಬ್ಬರದೂ ಒಂದೊಂದು ರೀತಿಯ ಪ್ರಹಸನ. ಈಗಿನ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ವಿಧಾನಸೌಧದಲ್ಲಿ ಕೂರೋ ಬದಲು, ‘ಸರ್ಕಾರದ ಖರ್ಚಿನಲ್ಲಿ’ ದೇವಸ್ಥಾನಗಳನ್ನು ಸುತ್ತುತ್ತಿದ್ದಾರೆ. ಇವರು ಹೀಗೆ ದೇವಾಲಯದಲ್ಲಿರುವ ದೇವರನ್ನು ನೋಡಲು ಹೋದರೆ, ಎಲ್ಲೆಲ್ಲೋ ಇರೋ ಜನ, ಈ ‘ಸ್ವಾಮಿ’ಗಳನ್ನ ನೋಡೋದಕ್ಕೆ ಸಾವಿರಾರು ರೂಪಾಯಿ ಖರ್ಚು ಮಾಡ್ಕೊಂಡು, ‘ಒಂದು ನಿಮಿಷದ’ ದರ್ಶನಕ್ಕೆ ಬೆಂಗಳೂರಿನ ‘ಕೃಷ್ಣಾ’ಗೇ ಬರಬೇಕೇ?
ವಿಧಾನಸೌಧದಲ್ಲಿರೋ ಕಡತಗಳಿಗೆ ಯಾವಾಗ ಮುಕ್ತಿ? ಸರ್ಕಾರದ ಕಾರ್ಯಾಲಯಗಳಲ್ಲಿ ಜನರಿಗೆ ಸಿಗಬೇಕಾದ ಸೌಲಭ್ಯಗಳು ಸಿಕ್ಕರೆ, ಜನ ಎಲ್ಲಾ ಕೆಲಸ ಬಿಟ್ಟು ಸಾವಿರಾರು ರೂಪಾಯಿ ಖರ್ಚು ಮಾಡಿ, ತಮ್ಮ ಅಹವಾಲನ್ನು ಮುಖ್ಯಮಂತ್ರಿ ಕೈಗೆ ಕೊಡುವುದಕ್ಕೆ ಬೆಂಗಳೂರಿಗೆ ಬರುವರೇ? ಇದು ಆಡಳಿತದ ವೈಫಲ್ಯ ಅಲ್ಲವೇ?

ಬೆಂಗಳೂರಿನಲ್ಲಿರೋ ಭ್ರಷ್ಟ ಅಧಿಕಾರಿಗಳೇ, ತಮ್ಮ ಭ್ರಷ್ಟ ನೌಕರರಿಂದ ಎಲ್ಲೆಲ್ಲಿ ಎಷ್ಟೆಷ್ಟು ಕಾನೂನುಬಾಹಿರ ಕೆಲಸಗಳಾಗುತ್ತಿವೆಯೆಂದು ‘ನಿಷ್ಠುರ ರೀತಿಯಲ್ಲಿ ವರದಿ’ಗಳನ್ನು ಪಡೆದು ತಮಗೆ ಬರಬೇಕಾದ ‘ದೇಣಿಗೆ’ ವಸೂಲು ಮಾಡುತ್ತಿಲ್ಲವೇ? ಅವರೆಲ್ಲಾ, ಸುತ್ತುತ್ತಾ ಸಮಯ ವ್ಯರ್ಥ ಮಾಡುತ್ತಾರೆಯೇ? ಎಲ್ಲ ಇಲಾಖೆಗಳಲ್ಲಿ ಏನೇನು ನಡೆಯುತ್ತಿದೆಯೆಂದು ವರದಿಗಳನ್ನು ‘ಭ್ರಷ್ಟ’ ಅಧಿಕಾರಿಗಳು ಪಡೆಯುತ್ತಿರುವಂತೆ, ನಮ್ಮ ‘ನಿಷ್ಠ’ ಮಣ್ಣಿನ ಮಕ್ಕಳಿಗೆ ಏಕೆ ಸಾಧ್ಯವಾಗದು?

ಪ್ರಧಾನಿ ಮೋದಿಯವರು ಎಲ್ಲೇ ಇದ್ದರೂ, ಪ್ರತಿದಿನ ಬೆಳಿಗ್ಗೆ 7.30ಕ್ಕೆ ಪ್ರಮುಖ ದಿನ ಪತ್ರಿಕೆಗಳಲ್ಲಿರುವ ಮುಖ್ಯಾಂಶವನ್ನು ಪಡೆಯುತ್ತಾರೆ. ಸಂಜೆ 7 ರಿಂದ ರಾತ್ರಿ 9ರವರೆಗೆ ಪ್ರತಿಯೊಂದು ರಾಜ್ಯದಲ್ಲಿ ಆಗುತ್ತಿರುವ ‘ಪ್ರತಿಯೊಂದು ಪ್ರಮುಖ’ ವಿಷಯವನ್ನು ಪಡೆಯುತ್ತಾರೆ. ಇದುವರೆಗೆ 175ಕ್ಕೂ ಹೆಚ್ಚು ಐಎಎಸ್ ‘ಭ್ರಷ್ಟ’ ಅಧಿಕಾರಿಗಳನ್ನು ಮನೆಗಳಿಗೆ ಅಟ್ಟಿದ್ದಾರೆ. ಅವರು ವಿದೇಶಕ್ಕೆ ಹೋಗುವಾಗ ಜೊತೆಗೆ, ಹಿಂದಿನವರಂತೆ ‘ತಮ್ಮ ಅಡುಗೆಯವರನ್ನು’ ಕರೆದುಕೊಂಡು ಹೋಗುವುದಿಲ್ಲ. ಸಿಕ್ಕಿದ ಕಡೆ ಸಿಕ್ಕಿದ ಆಹಾರ ಸೇವಿಸುತ್ತಾರೆ. ‘ಪತ್ರಕರ್ತರ’ ಪಟಾಲಂ ಅನ್ನು ಜೊತೆಯಲ್ಲಿ ಕರೆದುಕೊಂಡು ಹೋಗುವುದಿಲ್ಲ. ಇದೇ ಕಾರಣಕ್ಕೆ ಅವರ ವಿರೋಧಿಗಳೂ, ಅವರ ಪಕ್ಷದವರೂ ಅವರನ್ನು ಕಂಡರೆ ಹೆದರುವುದು.

ಇಲ್ಲಿ, ಯಾವುದೇ ಮುಖ್ಯಮಂತ್ರಿಗೆ ಬಿಬಿಎಂಪಿಯನ್ನು ‘ರಿಪೇರಿ’ ಮಾಡುವುದಕ್ಕಾಗುತ್ತಿಲ್ಲ. ಇಂತಹ ಸನ್ನಿವೇಶದಲ್ಲಿ ಈ ‘ಜನತಾ ದರ್ಶನ’ ಸಾಧಿಸುವುದಾದರೂ ಏನು?

–ಕೆ.ಎನ್. ಭಗವಾನ್, ಬೆಂಗಳೂರು

ಬರಹ ಇಷ್ಟವಾಯಿತೆ?

 • 3

  Happy
 • 0

  Amused
 • 0

  Sad
 • 0

  Frustrated
 • 1

  Angry

Comments:

0 comments

Write the first review for this !