ಕೆಳದಿ ಇತಿಹಾಸ ಸಂಗ್ರಹಾಲಯವನ್ನು ಉಳಿಸಿ

7

ಕೆಳದಿ ಇತಿಹಾಸ ಸಂಗ್ರಹಾಲಯವನ್ನು ಉಳಿಸಿ

Published:
Updated:

ಇತಿಹಾಸ ಸಂಶೋಧಕ ಡಾ. ಕೆಳದಿ ಗುಂಡಾ ಜೋಯಿಸ್ ಅವರ ಪರಿಶ್ರಮದಿಂದ ಸಾಗರ ತಾಲ್ಲೂಕಿನ ಕೆಳದಿ ಗ್ರಾಮದಲ್ಲಿ ಸ್ಥಾಪಿಸಲಾದ ‘ಕೆಳದಿ ಇತಿಹಾಸ ಸಂಗ್ರಹಾಲಯ’ಕ್ಕೆ ರಾಜ್ಯ ಸರ್ಕಾರ ಹಾಗೂ ಕುವೆಂಪು ವಿಶ್ವವಿದ್ಯಾಲಯ ಹಣಕಾಸು ನೆರವು ನೀಡುವುದನ್ನು ನಿಲ್ಲಿಸಿವೆಯೆಂಬ ಸುದ್ದಿ ಸಾರಸ್ವತ ಲೋಕಕ್ಕೆ ಬಡಿದ ಸಿಡಿಲು ಎಂದು ಹೇಳಬಹುದಾಗಿದೆ.

ಕೆಳದಿ ಇತಿಹಾಸ ಸಂಗ್ರಹಾಲಯವನ್ನು ಹಣದ ಕೊರತೆಯ ಕಾರಣದಿಂದ ಮುಚ್ಚುವುದು ವಿಷಾದಕರ ಸಂಗತಿ. ಅಜ್ಞಾನದ ಕೊಲ್ಲಿಯನ್ನು ದಾಟುವ ಸೇತುವೆಯೆನಿಸಿದ ಇವುಗಳನ್ನು ಕಟ್ಟುವ ಕೆಲಸವಾಗಬೇಕು. ಹಾಗೆ ನೋಡಿದರೆ ಇಂತಹ ಸಂಗ್ರಹಾಲಯಗಳ ಉಳಿವಿಗಾಗಿ ಸಹಿ ಸಂಗ್ರಹದ ಅವಶ್ಯಕತೆಯೇ ಇಲ್ಲ.

ರಾಜ್ಯ ಸರ್ಕಾರ ಹಾಗೂ ಕುವೆಂಪು ವಿಶ್ವವಿದ್ಯಾಲಯ ಆಸಕ್ತಿ ವಹಿಸಿ ಆದ್ಯತೆ ನೀಡಿ ಕೆಳದಿ ಇತಿಹಾಸ ವಸ್ತು ಸಂಗ್ರಹಾಲಯವನ್ನು ಉಳಿಸಿ ಬೆಳೆಸಬೇಕು.

ಬರಹ ಇಷ್ಟವಾಯಿತೆ?

 • 5

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !