ಮೊಬೈಲ್‌ ದೂರವಿರಿಸಿ

7

ಮೊಬೈಲ್‌ ದೂರವಿರಿಸಿ

Published:
Updated:

‘ಸ್ಮಾರ್ಟ್ ಫೋನ್ ಬಳಕೆ ನಿಲ್ಲಿಸಿದ್ದರಿಂದಲೇ ಜೆಇಇ ಮುಖ್ಯ ಪರೀಕ್ಷೆಯ ಮೊದಲ ಪತ್ರಿಕೆಯಲ್ಲಿ ಶೇ 100 ಅಂಕ ಗಳಿಸಿ ರಾಜ್ಯಕ್ಕೆ ಟಾಪರ್ ಆಗಲು ಸಾಧ್ಯವಾಯಿತು’ ಎಂದು ಕೇವಿನ್ ಮಾರ್ಟಿನ್ ತಮ್ಮ ಯಶಸ್ಸಿನ ಗುಟ್ಟು ಬಿಚ್ಚಿಟ್ಟಿದ್ದಾರೆ (ಪ್ರ.ವಾ., ಜ.20)

ಈ ಸುದ್ದಿ ವಿದ್ಯಾರ್ಥಿಗಳಿಗೆ ಸಕಾಲಿಕವೂ, ಸ್ಫೂರ್ತಿದಾಯಕವೂ ಆಗಿದೆ. ಸದಾ ಮೊಬೈಲ್, ವಾಟ್ಸ್ಆ್ಯಪ್, ಪಬ್‌ಜಿ ಎಂದೇ ಕಾಲಹರಣ ಮಾಡುವ ವಿದ್ಯಾರ್ಥಿಗಳು ವ್ಯಾಸಂಗದಿಂದ ವಿಚಲಿತರಾಗಿರುವುದು ಸಾಮಾನ್ಯ ವಿದ್ಯಮಾನ. ಮೊಬೈಲ್ ಸಂಸ್ಕೃತಿ ವಿದ್ಯಾರ್ಥಿಗಳ ಭವಿಷ್ಯಕ್ಕೆ ಮಾರಕವಾಗಿದೆ ಎಂಬುದು ಪೋಷಕರ ದಿನನಿತ್ಯದ ಅಳಲು.

ವಾರ್ಷಿಕ ಪರೀಕ್ಷೆಗಳಿಗೆ ಸಿದ್ಧತೆ ನಡೆಸುತ್ತಿರುವ ವಿದ್ಯಾರ್ಥಿಗಳು ಇನ್ನಾದರೂ ಮೊಬೈಲ್ ದೂರವಿರಿಸಿ, ವ್ಯಾಸಂಗದಲ್ಲಿ ಗಮನವಿರಿಸಿ ಭವ್ಯ ಭವಿಷ್ಯವನ್ನು ತಮ್ಮದಾಗಿಸಿಕೊಳ್ಳಲಿ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 1

  Sad
 • 0

  Frustrated
 • 0

  Angry

Comments:

0 comments

Write the first review for this !