ಚುನಾವಣಾ ಆಯೋಗ ಕಠಿಣವಾಗಿ ವರ್ತಿಸಲಿ

ಮಂಗಳವಾರ, ಏಪ್ರಿಲ್ 23, 2019
29 °C

ಚುನಾವಣಾ ಆಯೋಗ ಕಠಿಣವಾಗಿ ವರ್ತಿಸಲಿ

Published:
Updated:

ಲೋಕಸಭಾ ಚುನಾವಣೆಯಿಂದಾಗಿ ದೇಶದಲ್ಲಿ ನೀತಿ ಸಂಹಿತೆ ಜಾರಿಯಲ್ಲಿದೆ. ಆದರೂ ಕೆಲವೆಡೆ ನರೇಂದ್ರ ಮೋದಿ, ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ ಹಾಗೂ ಇತರ ನಾಯಕರ ಭಾವಚಿತ್ರವಿರುವ ಸೀರೆ, ಟಿ- ಶರ್ಟ್‍ಗಳು ಮಾರುಕಟ್ಟೆಗೆ ಬಂದಿವೆ. ಮತ್ತೊಂದು ಕಡೆ, ಮೋದಿಯವರ ಭಾವಚಿತ್ರದ ಲೋಗೊವುಳ್ಳ ಕಂಟೆಂಟ್‌ ಟಿವಿ (ನಮೋ ಟಿವಿ) ವಾಹಿನಿ ಆರಂಭವಾಗಿದೆ. ಮೋದಿ ಕುರಿತ ಚಲನಚಿತ್ರ ಬೇರೆ ಇದೆ. 

ಚುನಾವಣೆಯ ಹೊಸ್ತಿಲಲ್ಲಿ ರಾಜಕೀಯ ವ್ಯಕ್ತಿಗಳ ಕುರಿತಾಗಿ ಇಂತಹ ಚಿತ್ರ ಬಿಡುಗಡೆ, ವಾಹಿನಿಗಳ ಆರಂಭಕ್ಕೆ ಚುನಾವಣಾ ಆಯೋಗ  ನಿರ್ಬಂಧ ಹೇರುವುದು ಒಳ್ಳೆಯದು. ಆಡಳಿತಾರೂಢರು ನೀತಿ ಸಂಹಿತೆ ಉಲ್ಲಂಘಿಸಿದರೆ ಆಯೋಗ ಸ್ವಯಂಪ್ರೇರಿತವಾಗಿ ದೂರು ದಾಖಲಿಸಿಕೊಂಡು ಅಂತಹ ಕಾರ್ಯಗಳಿಗೆ ಕಡಿವಾಣ ಹಾಕಬೇಕು. ಇಲ್ಲವಾದಲ್ಲಿ ಮಾದರಿ ನೀತಿ ಸಂಹಿತೆಗೆ ಅರ್ಥ ಇರುವುದಿಲ್ಲ.

-ಸಂದೀಪ ಚಿಕ್ಕಮಲ್ಲನಹೊಳೆ, ಜಗಳೂರು

ಬರಹ ಇಷ್ಟವಾಯಿತೆ?

 • 2

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !