ಭಾನುವಾರ, ನವೆಂಬರ್ 17, 2019
21 °C

ಸಾರ್ವಜನಿಕ ಆಸ್ತಿ ಹಾಳಾಗದಿರಲಿ

Published:
Updated:

ಕಾಂಗ್ರೆಸ್‌ ಮುಖಂಡ, ಶಾಸಕ ಡಿ.ಕೆ.ಶಿವಕುಮಾರ್ ಅವರನ್ನು ಜಾರಿ ನಿರ್ದೇಶನಾಲಯ (ಇ.ಡಿ) ಬಂಧಿಸಿರು ವುದರ ವಿರುದ್ಧ ರಾಜ್ಯದ ಹಲವೆಡೆ ಅವರ ಬೆಂಬಲಿಗರು ಪ್ರತಿಭಟನೆ ನಡೆಸಿದ್ದಾರೆ. ಸಾರ್ವಜನಿಕ ವಾಹನಕ್ಕೆ ಬೆಂಕಿ ಹಚ್ಚುವುದೂ ಸೇರಿದಂತೆ ಆಸ್ತಿಗಳಿಗೆ ಹಾನಿಯಾಗುವಂತೆ ಮಾಡುತ್ತಿದ್ದಾರೆ. ಇಂತಹ ನಡೆ, ಎತ್ತಿಗೆ ಜ್ವರ ಬಂದರೆ ಎಮ್ಮೆಗೆ ಬರೆ ಎನ್ನುವಂತೆ ಇದೆ. ದೇಶದ ಪ್ರತಿಯೊಬ್ಬ ನಾಗರಿಕನಿಗೂ ನ್ಯಾಯಾಲಯದಲ್ಲಿ ಕಾನೂನುಬದ್ಧವಾಗಿ ಹೋರಾಡುವ ಹಕ್ಕು ಇದ್ದೇ ಇದೆ. ತಮ್ಮ ತಪ್ಪಿಲ್ಲ ಎಂದು ಮನವರಿಕೆಯಾದಲ್ಲಿ ಶಿವಕುಮಾರ್‌ ಅವರು ಅದನ್ನು ಸಾಬೀತುಪಡಿಸಿ ನ್ಯಾಯಾಲಯದಿಂದ ತಲೆಯೆತ್ತಿಕೊಂಡು ಹೊರಬರಬಹುದು. ಕಾನೂನು ಎಲ್ಲರಿಗೂ ಒಂದೇ ಎಂಬುದಕ್ಕೆ ಇಂತಹ ಮುಖಂಡರೇ ಮಾದರಿಯಾಗಿ ನಿಲ್ಲಬೇಕು.

ಪ್ರತಿಭಟನೆ ಅವಶ್ಯವಾದಲ್ಲಿ ಶಾಂತಿಯುತವಾಗಿ ಸರ್ಕಾರದ ಗಮನ ಸೆಳೆಯುವಂತೆ ನಡೆಸಲಿ. ಸಾರ್ವಜನಿಕ ಆಸ್ತಿಗೆ ಹಾನಿ ಮಾಡುವ ಯಾರೇ ಆಗಲಿ ಅವರ ವಿರುದ್ಧ ಸರ್ಕಾರ ಕ್ರಮ ಕೈಗೊಳ್ಳಲಿ. ನಾವು ಸಂಚರಿಸುವ ವಾಹನಗಳಿಗೇ ಬೆಂಕಿ ಇಟ್ಟು, ಬಸ್‌ ನಿಲ್ದಾಣದಲ್ಲಿ ನಿಂತು ‘ಇನ್ನೂ ಬಸ್‌ ಬರಲಿಲ್ಲವಲ್ಲಾ’ ಎಂದು ಗೊಣಗುವ ಸ್ಥಿತಿ ನಿರ್ಮಾಣ ಆಗದಿರಲಿ.

ಪತ್ತಂಗಿ ಎಸ್. ಮುರಳಿ, ಬೆಂಗಳೂರು

ಪ್ರತಿಕ್ರಿಯಿಸಿ (+)